ಎಡಗಾಲಿನ ನೋವಿಗೆ ಬಲಗಾಲಿಗೆ ಆಪರೇಷನ್‌!

ಹಾಸನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರಿಗೆ ಭಾರೀ ನಷ್ಟ ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಜ್ಯೋತಿ ಎಂಬ ಮಹಿಳೆ ಎರಡು ವರ್ಷಗಳ ಹಿಂದೆ ನಡೆದ ಅಪಘಾತದ ವೇಳೆ ಎಡಗಾಲಿಗೆ ರಾಡ್‌ ಅಳವಡಿಸಿದ್ದರು. ಇತ್ತೀಚೆಗೆ ಆ ಕಾಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು.

ಆದರೆ, ಚಿಕಿತ್ಸೆ ನೀಡಿದ ವೈದ್ಯ ಡಾ. ಸಂತೋಷ್ ಎಡಗಾಲಿಗೆ ರಾಡ್‌ ತೆಗೆಸಬೇಕಾಗಿದ್ದಾಗಲೂ ತಪ್ಪಾಗಿ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿರುವುದು ಇದೀಗ ಬಹಿರಂಗವಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಈ ಭಾರಿ ಎಡವಟ್ಟನ್ನು ಅರಿತ ವೈದ್ಯರು ಬಳಿಕ ಎಡಗಾಲಿನ ರಾಡ್‌ ತೆಗೆಯುವ ಕಾರ್ಯ ಮುಂದುವರೆಸಿದ್ದಾರೆ.

ಈ ನಿರ್ಲಕ್ಷ್ಯದಿಂದ ಜ್ಯೋತಿ ಅವರು ಎರಡು ಕಾಲುಗಳಲ್ಲಿಯೂ ತೊಂದರೆಯನ್ನ ಅನುಭವಿಸಬೇಕಾದ ಸ್ಥಿತಿ ಉಂಟಾಗಿದೆ. ಈ ಕುರಿತು ಜ್ಯೋತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಂಬಂಧಿತ ವೈದ್ಯರ ವಿರುದ್ಧ ಮೇಲ್ದರ್ಜೆಯ ತನಿಖೆ ನಡೆಸುವ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author