Wednesday, September 24, 2025

Latest Posts

ಸಿದ್ದುಗೂ ಮುನ್ನ ಬಿಹಾರಕ್ಕೆ ಡಿಕೆಶಿ!

- Advertisement -

ಸ್ವಾತಂತ್ರ್ಯ ಭಾರತದ ನಂತರ ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಇಂದು ಕಾಂಗ್ರೆಸ್ CWC ಸಭೆ ನಡೆಯುತ್ತಿದೆ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಿಮಿತ್ತ, ಸಿಎಂ ಸಿದ್ದರಾಮಯ್ಯಗೂ ಮುನ್ನವೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಹಾರಕ್ಕೆ ಹೋಗಿದ್ದಾರೆ. ಈ ವೇಳೆ ಗಯಾದಲ್ಲಿರುವ ಪುರಾಣ ಪ್ರಸಿದ್ಧ ವಿಷ್ಣುಪಾದ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ತಮ್ಮ ಇಷ್ಟಾರ್ಥ ಸಿದ್ಧಿಗೆ, ಭಗವಾನ್‌ ವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಮೊದಲು ಫಲ್ಗು ನದಿಯಲ್ಲಿ ಪುಣ್ಯಸ್ನಾನ ಮಾಡಿ, ಬಳಿಕ ದೇವರ ದರ್ಶನ ಮಾಡಿದ್ದಾರೆ.

ನವೆಂಬರ್‌ ತಿಂಗಳು ಹತ್ತಿರವಾಗುತ್ತಿದ್ದಂತೆ, ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ಸಚಿವ ಸಂಪುಟ ಪುನಾರಚನೆ, ಮತ್ತೊಂದೆಡೆ ಸಿಎಂ ಬದಲಾವಣೆ ವಿಚಾರಗಳು ಭಾರೀ ಮಹತ್ವ ಪಡೆದುಕೊಂಡಿವೆ. ಈ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್‌ ಟೆಂಪಲ್‌ ರನ್‌ ಮುಂದುವರೆಸಿದ್ದಾರೆ.

ಅರಳಿ ಮರ ಪ್ರದಕ್ಷಿಣೆ ಹಾಕಿ, ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಕಲ್ಲಿನ ಮೇಲೆ ಕೆತ್ತಲಾದ ವಿಷ್ಣುವಿನ ಪಾದದ ಗುರುತುಗಳಿಗೆ, ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ. ಇದೇ ದೇವಸ್ಥಾನಕ್ಕೆ ಕಳೆದ 1 ವಾರದ ಹಿಂದಷ್ಟೇ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ರು.

ವಿಷ್ಣುವಿನ ಪಾದ ಪೂಜಿಸುವ ವಿಶ್ವದ ಏಕೈಕ ದೇವಾಲಯ ಇದಾಗಿದ್ದು, ಇಲ್ಲಿನ ರಹಸ್ಯಗಳನ್ನು ಕಂಡು ಹಿಡಿಯಲು ಯುಗ ಯುಗಗಳಿಂದಲೂ ಸಾಧ್ಯವಾಗಿಲ್ಲ. ವಿಷ್ಣುಪಾದ ದೇಗುಲವನ್ನು ಸತ್ಯಯುಗದಲ್ಲಿ ಸ್ಥಾಪಿಸಲಾಗಿತ್ತೆಂದು ಹೇಳಲಾಗುತ್ತದೆ. ಈ ದೇಗುಲಕ್ಕೆ ಭೇಟಿ ನೀಡುವುದರಿದ, ಶ್ರೀಹರಿಯ ಆಶೀರ್ವಾದ ಸಿಗುತ್ತದೆ ಮತ್ತು ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಇದೀಗ ಡಿಕೆಶಿ ಕೂಡ ವಿಷ್ಣುಪಾದ ದೇಗುಲಕ್ಕೆ ಭೇಟಿ ಕೊಟ್ಟಿದ್ದು, ಭಾರೀ ಕುತೂಹಲ ಮೂಡಿಸಿದೆ.

- Advertisement -

Latest Posts

Don't Miss