Wednesday, September 24, 2025

Latest Posts

ಪಾಟ್ನಾದಲ್ಲಿ ಟಗರಿನ ಹವಾ.. ಸಿದ್ದು ಫುಲ್ ಖುಷ್ ಹುವಾ!!

- Advertisement -

ಜಿಂದಾಬಾದ್‌ ಜಿಂದಾಬಾದ್‌ ಸಿದ್ದರಾಮಯ್ಯ ಜಿಂದಾಬಾದ್. ಜಿಂದಾಬಾದ್‌ ಜಿಂದಾಬಾದ್‌ ಸಿದ್ದರಾಮಯ್ಯ ಜಿಂದಾಬಾದ್. ಜಿಂದಾಬಾದ್‌ ಜಿಂದಾಬಾದ್‌ ಕಾಂಗ್ರೆಸ್‌ ಜಿಂದಾಬಾದ್‌. ಈ ರೀತಿಯಾಗಿ ಬಹುಪಾರಕ್ ಕೂಗಿರುವುದು ಸಿಎಂ ಸಿದ್ದರಾಮಯ್ಯಗೆ. ಇದು ಎಲ್ಲೊ ಬೆಂಗಳೂರು, ಬೀದರ್‌, ರಾಯಚೂರು, ಮೈಸೂರು ಮತ್ತೆಲ್ಲೊ ಅಲ್ಲ. ಬಿಹಾರ ರಾಜ್ಯದಲ್ಲಿ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಬಿಹಾರದ ಪಟ್ನಾಗೆ ಸಿದ್ದರಾಮಯ್ಯ ಆಗಮಿಸಿದ ಸಂದರ್ಭದಲ್ಲಿ ಏರ್ಪೋರ್ಟ್‌ಗೆ ಬರುತ್ತಿದ್ದಂತೆ ಕೇಳಿಸಿದ ಕೂಗು ಇದು.

ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಬಿಹಾರದ ಪಾಟ್ನಾಗೆ ಆಗಮಿಸಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಹರ್ಷೋದ್ಘಾರ, ಪ್ರೀತಿ ತುಂಬಿದ ಸ್ವಾಗತ ಕಂಡು ಖುಷಿಯಾಯಿತು. ದೇಶದ ಯಾವ ಮೂಲೆಗೆ ಹೋದರೂ ಇದೇ ತೆರನಾದ ಪ್ರೀತಿ, ಅಕ್ಕರೆಯಿಂದ ಜನ ನನ್ನನ್ನು ಎದುರುಗೊಳ್ಳುತ್ತಾರೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಆ ಸಿದ್ಧಾಂತದಲ್ಲಿ ನಾನು ಹೊಂದಿರುವ ಬದ್ಧತೆ. ಕಾಂಗ್ರೆಸ್ ಪಕ್ಷದ ಸದಸ್ಯ ಎನ್ನಲು ನನಗೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಭಾಗಿಯಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಟ್ನಾ ಭೂಮಿ ಯಾವಾಗಲೂ ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ನಿಂತಿದೆ. ಪಾಟ್ನಾದಲ್ಲಿ ನಡೆಯುತ್ತಿರುವ ಈ ಕಾರ್ಯಕಾರಿ ಸಭೆ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಕಾರಣ, ನಮ್ಮ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತವಾದಿಗಳು ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯವನ್ನು ಕತ್ತು ಹಿಸುಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರ್ನಾಟಕದ ಮಹದೇವಪುರ, ಆಳಂದದಲ್ಲಿ ನಡೆದ ಮತ ಕಳ್ಳತನವನ್ನು ಬಯಲಿಗೆಳೆದಿದ್ದಾರೆ. ಚುನಾವಣಾ ಅಕ್ರಮಗಳ ವಿರುದ್ಧ ರಾಹುಲ್ ಗಾಂಧಿ ಅವರು ನಡೆಸುವ ನಿರಂತರ ಹೋರಾಟ ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿ ಎಂದಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss