ಹಣ ಉಳಿಸೋಕೆ ಐಡಿಯಾ ಮಾಡಿದ ಕಾಂಗ್ರೆಸ್ ಶಾಸಕರೊಬ್ರು, ಪುದುಚೇರಿಯಲ್ಲಿ ಕಾರು ನೋಂದಣಿ ಮಾಡಿಸಿ ಸಿಕ್ಕಿಬಿದ್ದಿದ್ದಾರೆ. ನಾಗಠಾಣ ಮೀಸಲು ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ವಿರುದ್ಧ ಸರ್ಕಾರಕ್ಕೆ ತೆರಿಗೆ ಕಟ್ಟದ ಆರೋಪ ಕೇಳಿ ಬಂದಿದೆ.
ಶಾಸಕ ವಿಠ್ಠಲ ಕಟಕದೊಂಡ ಬಳಸುತ್ತಿರುವ ಕಾರು, ಪುದುಚೇರಿಯ ವಿಲ್ಲೈನೂರ್ ಆರ್ಟಿಒ ಕಚೇರಿಯಲ್ಲಿ ನೋಂದಣಿಯಾಗಿದೆ. 2024ರ ಜುಲೈ 17ರಂದು ಖರೀದಿಸಿರುವ PY05 VE9836 ನೋಂದಣಿ ಸಂಖ್ಯೆಯುಳ್ಳ ಇನ್ನೋವಾ ಕ್ರಿಸ್ಟಾ ಕಾರು, ಕಟಕದೊಂಡ ಕುಟುಂಬದವರ ಹೆಸರಿನಲ್ಲಿದೆ. ಇದರ ಮೊದಲ ಮಾಲೀಕರು ಸಹ ಇವರ ಕುಟುಂಬದವರೇ ಆಗಿದ್ದಾರೆ.
ಈ ಮೂಲಕ ಸಾರಿಗೆ ಇಲಾಖೆ ಹಾಗೂ ವಾಹನ ಖರೀದಿ ಮೂಲಕ ಕರ್ನಾಟಕ ರಾಜ್ಯಕ್ಕೆ ಬರಬೇಕಾದ, ತೆರಿಗೆ ನಷ್ಟ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಕರ್ನಾಟಕ ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆಯಾಗಿ ಆರೋಪ ಎದುರಿಸುತ್ತಿದ್ದಾರೆ.
ಕಾಂಗ್ರೆಸ್ ಶಾಸಕ ವಿಠ್ಠಲ ಕಟಕದೊಂಡ ವಿಜಯಪುರದಲ್ಲಿ ನೆಲೆಸಿ, ಅಂತಾರಾಜ್ಯಕ್ಕೆ ತೆರಿಗೆ ಕಟ್ಟಿದ್ದಾರೆ. ಪುದುಚೇರಿ ನೋಂದಣಿ ಹೊಂದಿರುವ ಕಾರಿಗೆ, ವಿಧಾನಸೌಧದ ಕಚೇರಿಗೆ ಎಂಟ್ರಿ ಪಾಸ್ ಹೇಗೆ ನೀಡಿದ್ದಾರೆಂಬ ಪ್ರಶ್ನೆಗಳು ಭುಗಿಲೆದ್ದಿವೆ.
ಈಗಾಗಲೇ ವಿಜಯಪುರದಲ್ಲಿ ಪುದುಚೇರಿ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಹೊರ ರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳನ್ನು, ಆರ್ಟಿಒ ಇಲಾಖೆಯ ಅಧಿಕಾರಿಗಳಿಂದ ಜಪ್ತಿ ಕಾರ್ಯಾಚರಣೆ ಶುರುವಾಗಿದೆ. ಹೀಗಾಗಿ ಶಾಸಕ ವಿಠ್ಠಲ ಕಟಕದೊಂಡ ಕಾರ್ ಕೂಡ, ಸೀಜ್ ಆಗುವ ಸಾಧ್ಯತೆ ಇದೆ.

