Health tips: ಶ್ವಾಸಕೋಶದ ಸಮಸ್ಯೆಯ ಬಗ್ಗೆ ವೈದ್ಯರಾಗಿರುವ ಡಾ.ಭವ್ಯ ಅವರು ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು ಶ್ವಾಸಕೋಶದ ಸಮಸ್ಯೆಗೆ ಸುಲಭ ಪರಿಹಾರ ಯಾವುದು ಅಂತಲೂ ಹೇಳಿದ್ದಾರೆ.
ಶ್ವಾಸಕೋಶದ ಸಮಸ್ಯೆ ಇದ್ದವರು ಯೋಗ, ಪ್ರಾಣಾಯಾಮದ ಜತೆಗೆ ಸ್ವಿಮಿಂಗ್ ಮಾಡಬೇಕು ಅಂತಾರೆ ಡಾ.ಭವ್ಯ ಅವರು. ಶುದ್ಧ ನೀರಿರುವ ಜಾಗದಲ್ಲಿ ನಾವು ಈಜಿದರೆ, ಶ್ವಾಸಕೋಶದ ಸಮಸ್ಯೆ ತನ್ನಿಂದ ತಾನೇ ಹೋಗುತ್ತದೆ. ಅದೇ ರೀತಿ ಶುದ್ಧವಾದ ಗಾಳಿಾಯಾಡುವ ಜಾಗದಲ್ಲಿ ಕುಳಿತು ನಾವು ಯೋಗ, ಪ್ರಾಣಾಯಾಮ ಮಾಡಿದರೆ ಉತ್ತಮ ಅಂತಾರೆ ವೈದ್ಯರು.
ಅಲ್ಲದೇ ಉತ್ತಮ ಆಹಾರ ಸೇವನೆ ಮಾಡಿ ಡಯಟ್ ಮಾಡಿದರೂ ಅಸ್ತಮಾ ಸಮಸ್ಯೆ ಕಡಿಮೆಯಾಗುತ್ತದೆ. ಇನ್ನು ನೀವು ವೈದ್ಯರ ಬಳಿ ಪರಿಹಾರ ಕೇಳಿದರೆ, ಇನ್‌ಹೇಲರ್ಸ್. ಜನ ಇನ್‌ಹೇಲರ್ಸ್‌ಗೆ ತುಂಬಾ ಹೆದರುತ್ತಾರೆ. ಆದರೆ ನಾವು ಆಗಾಗ ಸೇವಿಸುವ ಪ್ಯಾರಾಸಿಟಮಾಲ್‌ಗಿಂತ ಇನ್‌ಹೇಲರ್ಸ್ ಎಷ್ಟೋ ಉತ್ತಮ ಅಂತಾರೆ ವೈದ್ಯರು.
ಇನ್‌ಹೇಲರ್ಸ್ ಸೇವಿಸಿದ ಬಳಿಕ ಬಾಯಿಯಲ್ಲಿ ಸ್ವಲ್ಪ ಮೆಡಿಸಿನ್ ಇರುತ್ತದೆ. ಅದನ್ನು ಉಗಿಯಬೇಕು. ಬಾಯಿ ಕ್ಲೀನ್ ಮಾಡಬೇಕು. ಆಗ ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.