Tuesday, October 7, 2025

Latest Posts

ಗೃಹಪ್ರವೇಶಕ್ಕೂ ಮುನ್ನವೇ ವಾಲಿದ 5 ಅಂತಸ್ಥಿನ ಕಟ್ಟಡ

- Advertisement -

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿಯಮ ಮೀರಿ ಕಟ್ಟಿದ್ದ ಕಟ್ಟಡವೊಂದು ವಾಲಿಕೊಂಡಿದೆ. ಈ ದೃಶ್ಯ ನೋಡಿದ ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಕೋರಮಂಗಲ 1ನೇ ಬ್ಲಾಕ್‌ನ ವೆಂಕಟಾಪುರದಲ್ಲಿ, 750 ಚದರಡಿ ಜಾಗದಲ್ಲಿ ಕಟ್ಟಡವೊಂದನ್ನು ನಿರ್ಮಿಸಲಾಗಿತ್ತು.

ನೆಲಮಹಡಿ ಸೇರಿ 5 ಅಂತಸ್ತುಗಳ ಕಟ್ಟಡ ಕುಸಿಯುವ ಆತಂಕ ಎದುರಾಗಿದೆ. ಈ ಕಟ್ಟಡದ ಗೃಹಪ್ರವೇಶ ಇನ್ನೂ ಆಗಿಲ್ಲ. ಚಿಕ್ಕಪುಟ್ಟ ಕೆಲಸಗಳು ಇನ್ನೂ ನಡೀತಿವೆ. ಕಟ್ಟಡದ ಸಾಕಷ್ಟು ಕೆಲಸಗಳು ಬಾಕಿ ಇರುವಾಗ್ಲೇ, ಅಡಿಪಾಯ ಮತ್ತು ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡು ಕಟ್ಟಡ ವಾಲಿದೆ.

ಮಂಜೂರಾತಿ ನಕ್ಷೆ ಉಲ್ಲಂಘನೆ ಮಾಡಿ, 5 ಅಂತಸ್ತಿನವರೆಗೆ ಕಟ್ಟಡ ಕಟ್ಟಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಡಿವಾಳ ಪೊಲೀಸರು ದೌಡಾಯಿಸಿದ್ದು, ಅಲ್ಲೇ ಮೊಕ್ಕಾಂ ಹೂಡಿದ್ದಾರೆ. ಸದ್ಯ, ಬಿಜಿಎ ಅಧಿಕಾರಿಗಳು ಜೆಸಿಬಿ ಮೂಲಕ, ವಾಲಿದ ಕಟ್ಟಡ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ಅತಿ ಆಸೆಗೆ ಬಿದ್ದು ಕಿರಿದಾದ ಪಿಲ್ಲರ್‌ಗಳ ಮೇಲೆ ಬಹುಮಹಡಿ ಕಟ್ಟಡ ಕಟ್ಟಲು ಹೋಗಿ, ನೆಲಸಮ ಮಾಡುವ ಸ್ಥಿತಿ ಬಂದಿದೆ. ಖರ್ಚು ಮಾಡಿದ್ದ ಲಕ್ಷಾಂತರ ರೂಪಾಯಿ ಹಣ, ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.

- Advertisement -

Latest Posts

Don't Miss