Hubli News: ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮೊದಲೇ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಹೀಗಿರುವಾಗ ಯಾವ ರಸ್ತೆಗೆ ಹೋದ್ರು ಸಹಿತ ಗುಂಡಿಬಿದ್ದ ರಸ್ತೆಗಳೇ ಹೆಚ್ಚಾಗಿವೆ. ಹೀಗಿರುವಾಗ ಪ್ರತಿಷ್ಠಿತ ಅಂಗಡಿಗಳ ಮಾಲೀಕರು ಪುಟ್ ಪಾತ್’ನ್ನು ಒತ್ತುವರಿ ಮಾಡಿಕೊಂಡು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ಹೌದು, ಹುಬ್ಬಳ್ಳಿಯ ಗೋಕುಲರಸ್ತೆಯಲ್ಲಿಯೇ ಪುಟ್ ಪಾತ್ ಒತ್ತುವರಿ ಮಾಡಲಾಗಿದೆ. ಇಲ್ಲಿನ ಮಾಂಗಲ್ಯ ಮಳಿಗೆಯ ಮಾಲೀಕರು ರಾಜಾರೋಷವಾಗಿ ಜನರಿಗೆ ಓಟಾಟಕ್ಕೆ ಬಿಡಲಾಗಿದ್ದ ಪುಟ್ ಪಾತ್ ನ್ನು ಒತ್ತುವರಿ ಮಾಡಿಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದಾರೆ.
ಮೊದಲೇ ಗೋಕುಲರಸ್ತೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಇಲ್ಲಿ ಪ್ರತಿನಿತ್ಯ ಲಕ್ಷಾಂತರ ವಾಹನಗಳ ಓಡಾಟದ ಜೊತೆಗೆ ವಿಐಪಿ, ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚಾರ ಮಾಡತ್ತಾರೆ. ಹೀಗಿರುವಾಗ ಈ ರಸ್ತೆಯ ಪುಟ್ ಬಾತ್’ನ್ನು ಮಾಂಲಗ್ಯ ಮಳಿಗೆ ಮಾಲೀಕರು ಪುಟ್ ಬಾತ್ ಒತ್ತುವರಿ ಮಾಡಿ ಬ್ಯಾರಿಕೇಡ್ ಗಳನ್ನು ಅಳವಡಿಸಿಕೊಂಡಿದ್ದಾರೆ.
ಈ ದಾರಿಯಲ್ಲಿ ಸಂಚರಿಸುವ ಜನ ಇದನ್ನು ಪ್ರಶ್ನೆ ಮಾಡಿದರೆ ಮಳಿಗೆ ಮಾಲೀಕ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಡೋಂಟ್ ಕೇರ್ ಮಾಸ್ಟರ್ ರೀತಿ ವರ್ತಿಸುತ್ತಿದ್ದಾನೆ. ಇನ್ನು ಮಳಿಗೆ ಮಾಲೀಕ ಇಷ್ಟು ರಾಜಾರೋಷವಾಗಿ ಪುಟ್ ಪಾತ್ ಅನ್ನು ಅತಿಕ್ರಮಿಸಿಕೊಂಡಿದ್ದರು ಕೂಡ ಸ್ಥಳೀಯ ಪಾಲಿಕೆ ಸದಸ್ಯರಾಗಲಿ, ವಲಯ ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡಿಲ್ಲ. ಅಧಿಕಾರಿಗಳ, ಸ್ಥಳೀಯ ಪಾಲಿಕೆ ಸದಸ್ಯರ ಜಾಣ ಕುರುಡು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪುಟ್ ಪಾತ್ ಮೇಲೆ ಬಡ ವ್ಯಾಪಾರಿ ಟೀ ಅಂಗಡಿ ಇಟ್ಟರೆ, ತರಕಾರಿ ವ್ಯಾಪಾರ ಮಾಡಿದ್ರೆ ಅದನ್ನು ರಾತ್ರೋರಾತ್ರಿ ತೆರವು ಮಾಡುವ ಹುಬ್ಬಳ್ಳಿ ಮಹಾ ನಗರ ಪಾಲಿಕೆಗೆ ಇಂತಹ ಬಹು ದೊಡ್ಡ ಒತ್ತುವರಿ ಮಾತ್ರ ಕಾಣದೇ ಇರೋದು ಮಾತ್ರ ದುರಂತವೇ ಸರಿ.



