ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹನಮಂತಾಪುರ ಗ್ರಾಮದಲ್ಲಿ ವಿಚಿತ್ರ ಗಂಭೀರ ಘಟನೆ ನಡೆದಿದೆ. ಕುಡಿಯುವ ನೀರು ಮತ್ತು ಸ್ವಚ್ಛತಾ ಸಮಸ್ಯೆಯಿಂದ ನರಳುತ್ತಿದ್ದ ಗ್ರಾಮಸ್ಥರ ಕೋಪ, ಕೊನೆಗೆ ತಾಲೂಕು ಪಂಚಾಯಿತ EO ಮತ್ತು PDO ಅನ್ನ ಕೋಣೆಯೊಳಗೆ ಕೂಡಿ ಹಾಕುವ ಮಟ್ಟಿಗೆ ತಲುಪಿದೆ. ಈ ದೃಶ್ಯಗಳೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಇತ್ತೀಚೆಗೆ ಚಾಮರಾಜನಗರದಲ್ಲಿ ಹುಲಿ ಹಿಡಿಯುವಲ್ಲಿ ವಿಫಲರಾದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬೋನ್ನಲ್ಲಿ ಗ್ರಾಮಸ್ಥರು ಕೂಡಿಹಾಕಿದ್ದರು. ಇದೀಗ ಅದೇ ರೀತಿ ಹೋಲುವ ಘಟನೆಯೊಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹನಮಂತಾಪುರದಲ್ಲಿ ನಡೆದಿದೆ.
ಕುಡಿಯುವ ನೀರು ಮತ್ತು ಚರಂಡಿ ಸ್ವಚ್ಚಗೊಳಿಸದೇ ಇರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತಾಲೂಕು ಪಂಚಾಯಿತ EO ಕೆಂಚಪ್ಪ ಹಾಗೂ ಹನಮಂತಾಪುರ PDO ಓಬಣ್ಣರನ್ನ ಕೋಣೆಯೊಳಗೆ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೋ ಒಂದು ವೈರಲ್ ಆಗಿದೆ.
ವರದಿ : ಲಾವಣ್ಯ ಅನಿಗೋಳ




