ಇವತ್ತು ನಾವು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಬಳಿ ಇರುವ ಸೂರ್ಯ ನಾರಾಯಣ ದೇವಸ್ಥಾನದ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ.

ಜನ ತಮ್ಮ ಕೋರಿಕೆ ಈಡೇರಲು ದೇವರಿಗೆ ಚಿನ್ನ ಬೆಳ್ಳಿ ವಜ್ರ ವೈಢೂರ್ಯ ಹಣ ಇತ್ಯಾದಿಗಳನ್ನ ನೀಡುವ ಹರಕೆ ಹೋರುತ್ತಾರೆ. ಆದ್ರೆ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಮಣ್ಣಿನ ಗೊಂಬೆಗಳನ್ನ ಹರಕೆ ರೂಪದಲ್ಲಿ ನೀಡುವ ಪ್ರತೀತಿ ಇದೆ.
ಮದುವೆಯಾಗದಿದ್ದರೆ ಜೋಡಿ ದಂಪತಿ ಗೊಂಬೆ, ಮನೆ ಕಟ್ಟಿಸಬೇಕೆಂದರೆ ಮನೆಯ ಗೊಂಬೆ, ವಾಹನ ಕಳೆದು ಹೋಗಿದ್ದರೆ ಅದು ಸಿಗಲಿಕ್ಕೆ ವಾಹನದ ಗೊಂಬೆ ಹೀಗೆ ಇತ್ಯಾದಿ ಗೊಂಬೆಗಳನ್ನ ಹರಕೆಯ ರೂಪದಲ್ಲಿ ನೀಡಿ ತೀರಿಸಬಹುದಾಗಿದೆ.
ಇನ್ನು ನಿಮಗೆ ಬೇಕಾದ ರೀತಿ ಗೊಂಬೆ ಮಾಡಿಕೊಡಲು ದೇವಸ್ಥಾನದ ಬಳಿಯೇ ಗೊಂಬೆ ತಯಾರಕರಿರುತ್ತಾರೆ. ಅವರಿಗೆ ಗೊಂಬೆಗೆ ಮಾಡಲು ದುಡ್ಡು ಕೊಟ್ಟರೆ, ಬೇಕಾದ ರೀತಿ ಗೊಂಬೆ ತಯಾರಿಸಿ ಕೊಡುತ್ತಾರೆ.
ಇನ್ನು ಇದರ ಇತಿಹಾಸವನ್ನ ನೋಡುವುದಾದರೆ, ಓರ್ವ ಹೆಂಗಸು ಈ ಸ್ಥಳದಲ್ಲೇ ಸೊಪ್ಪು ಕಡಿಯಲು ಬಂದಾಗ, ಆಕೆ ಬಳಸಿದ ಕತ್ತಿ ತಾಗಿ ಪಕ್ಕದಲ್ಲಿದ್ದ ಲಿಂಗದಿಂದ ರಕ್ತ ಚಿಮ್ಮಿತಂತೆ. ಆಕೆ ಹೆದರಿ ಆಕೆಯ ಮಗನನ್ನು ಸೂರ್ಯಾ ಎಂದು ಕರೆದಾಗ, ಮಗ ಓಡಿಬಂದನಂತೆ. ಇವರಿಬ್ಬರು ಸೇರಿ ಶಿವಲಿಂಗವಿರುವ ಬಗ್ಗೆ ಇಡೀ ಗ್ರಾಮಕ್ಕೆ ಪ್ರಚಾರ ಮಾಡಿದರಂತೆ. ಈ ಘಟನೆ ಬಳಿಕ ಆ ಗ್ರಾಮಕ್ಕೆ ಸೂರ್ಯ ಎಂಬ ಹೆಸರು ಬಂದಿದ್ದು, ತದನಂತರ ಅಲ್ಲಿ ಸೂರ್ಯ ನಾರಾಯಣ ದೇವಸ್ಥಾನ ಸ್ಥಾಪಿತವಾಯಿತೆಂದು ಹೇಳುತ್ತಾರೆ. ಇದರ ಹೆಸರು ಸೂರ್ಯ ನಾರಾಯಣ ದೇವಸ್ಥಾನ ಎಂದಾದರೂ ಇದರಲ್ಲಿ ರುದ್ರನಿಗೆ ಪೂಜೆ ನೆರವೇರಿಸಲಾಗುತ್ತದೆ.

ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375
ನಂ 1 ವಶೀಕರಣ ಸ್ಪೆಷಲಿಸ್ಟ್,
ಸ್ತ್ರೀ/ಪುರುಷ ವಶೀಕರಣ, ಲಕ್ಷ್ಮೀ/ವ್ಯಾಪಾರ/ಜನ ವಶೀಕರಣ, ಲೈಂಗಿಕ ದಾಂಪತ್ಯ, ಸಮಸ್ಯೆ, ಮಾಟ-ಮಂತ್ರ & ಶತ್ರುನಾಶ ಇನ್ನು ಹತ್ತು ಹಲವು ಸಮಸ್ಯೆಗಳನ್ನ ಕೇರಳದ ಅಷ್ಟಮಂಗಲ ಪೂಜೆ ಅತೀಂದ್ರಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು..
ಸಂಪರ್ಕಿಸಿ
ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375




