Sunday, October 5, 2025

Latest Posts

ಬಿಗ್‌ಬಾಸ್‌ 4ನೇ ಸ್ಪರ್ಧಿ ಯಾರು ಗೊತ್ತಾ?

- Advertisement -

ಕನ್ನಡ ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ, ಮನೆಗೆ ಬರುತ್ತಿರುವ 4ನೇ ಸ್ಪರ್ಧಿಯ ಹೆಸರು ರಿವೀಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ. ತುಳು, ಹಿಂದಿ, ಕನ್ನಡ, ಇಂಗ್ಲೀಷ್‌ನಲ್ಲಿ ವ್ಲಾಗ್ಸ್‌ ಮಾಡುವ ಕರಾವಳಿ ಹುಡುಗಿ ರಕ್ಷಿತಾ. ಹಲವು ಬಾರಿ ಕನ್ನಡ ತಪ್ಪಾಗಿ ಮಾತನಾಡಿ ಟ್ರೋಲ್‌ಗೆ ಒಳಗಾಗಿದ್ದಾರೆ.

ರಕ್ಷಿತಾ ಶೆಟ್ಟಿ ತಾಯಿ ಮಂಗಳೂರಿನವ್ರು. ರಕ್ಷಿತಾ ಹುಟ್ಟಿದ್ದು ಪಡುಬಿದ್ರೆಯಲ್ಲಿ. ಆದ್ರೆ ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಹೀಗಾಗಿ ಕನ್ನಡ ಮಾತಾಡೋಕೆ ಸ್ವಲ್ಪ ತಡವರಿಸ್ತಾರೆ. ತಪ್ಪಾಗಿ ಉಚ್ಛಾರಣೆ ಮಾಡಿ ಟೀಕೆಗೂ ಒಳಗಾದ್ರೂ, ಕನ್ನಡ ಮಾತಾಡೋದನ್ನು ನಿಲ್ಲಿಸಿಲ್ಲ.

ರಕ್ಷಿತಾ ಶೆಟ್ಟಿ ಪದವೀಧರೆ. ಬ್ಯಾಚುಲರ್ ಆಫ್‌ ಆರ್ಟ್ಸ್‌ ಮಾಸ್‌ ಕಮ್ಯೂನಿಕೇಷನ್‌ ಓದಿದ್ದಾರೆ. ಡಿಗ್ರಿ ಮುಗಿಸಿರುವ ಈಕೆಗೆ ಸ್ನಾತಕೋತ್ತರ ಪದವಿ ಪಡೆಯಲು ಇಂಟ್ರೆಸ್ಟ್‌ ಇಲ್ವಂತೆ. ರಕ್ಷಿತಾ ಶೆಟ್ಟಿಯ ಅದೆಷ್ಟೋ ವಿಡಿಯೋಗಳು ಸಖತ್‌ ಟ್ರೋಲ್‌ ಆಗಿವೆ. ಬಲೇ ಬಲೇ ಗಾಯ್ಸ್‌ ಎನ್ನುತ್ತಲೇ ವ್ಲಾಗ್ಸ್‌ ಮಾಡ್ತಾರೆ. ಇವರಿಗೆ ದೊಡ್ಡ ಫ್ಯಾನ್ಸ್‌ ಫಾಲೋವರ್ಸ್‌ ಇದ್ದಾರೆ. ಇವರು ರಾಷ್ಟ್ರ ಮಟ್ಟದ ಕ್ರೀಡಾಪುಟುವಂತೆ.

ರಕ್ಷಿತಾ ಶೆಟ್ಟಿ ಬಿಗ್‌ಬಾಸ್‌ ಸ್ಟೇಜ್‌ ಮೇಲೆ ಬರ್ತಿದ್ದಂತೆ, ಕರಾವಳಿಯ ಕನ್ನಡತಿ ರಕ್ಷಿತಾ ಶೆಟ್ಟಿ ಅವರಿಗೆ ಸ್ವಾಗತ ಅಂತಾ ಕಿಚ್ಚ ಸುದೀಪ್‌ ಹೇಳಿದ್ದಾರೆ. ಜೊತೆಗೆ ಮೀನು ಸಾರಿಗೆ ಸಕ್ಕರೆ ಹಾಕ್ತೀರಾ ಅಂತಾ ಸುದೀಪ್‌ ಪ್ರಶ್ನಿಸಿದ್ದು, ರಕ್ಷಿತಾ ಶೆಟ್ಟಿ ಉತ್ತರ, ಎಕ್ಸ್‌ಪ್ರೆಷನ್‌ಗೆ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಒಟ್ನಲ್ಲಿ, ಈ ಬಾರಿಯ ಬಿಗ್‌ಬಾಸ್‌ಗೆ ಸಕಲಕಲಾವಲ್ಲಭೆಯೊಬ್ರು ಎಂಟ್ರಿ ಕೊಟ್ಟಂತಾಗಿದೆ.

- Advertisement -

Latest Posts

Don't Miss