- Advertisement -
Dharwad: ಧಾರವಾಡ: ಯೂಟ್ಯೂಬ್ ಕಾಮಿಡಿ ಸ್ಟಾರ್ ಎನಿಸಿಕೊಂಡಿರುವ ಧಾರವಾಡ ಹೆಬ್ಬಳ್ಳಿ ಫಾರ್ಮ್ ನಿವಾಸಿಯಾಗಿರುವ ಖ್ವಾಜಾ ಶಿರಹಟ್ಟಿ ಊರ್ಫ್ ಮುಕಳೆಪ್ಪನ ಕುಟುಂದವರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ದಿಢೀರ್ ಆಗಮಿಸಿದ್ದಾರೆ.
ಮುಕಳೆಪ್ಪ ಹಾಗೂ ಗಾಯತ್ರಿ ಜಾಲಿಹಾಳ ವಿವಾಹ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದೆ. ಈಗಾಗಲೇ ಈ ಸಂಬಂಧ ಹಿಂದೂ ಸಂಘಟನೆಯವರು ಹೋರಾಟ ಸಹಿತ ಮಾಡುತ್ತಿದ್ದಾರೆ. ಹಿಂದೂ ಸಂಘಟನೆ ಕಾರ್ಯಕರ್ತರು ಮುಕಳೆಪ್ಪನ ಯೂಟ್ಯೂಬ್ ಚಾನೆಲ್ ಬಂದ್ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.
ಅಲ್ಲದೇ ತಮ್ಮ ಮನೆ ಮುಂದೆ ಯಾವಾಗ ಹಿಂದೂ ಸಂಘಟನೆ ಕಾರ್ಯಕರ್ತರು ಸೇರುತ್ತಾರೋ ಗೊತ್ತಿಲ್ಲ. ಆ ಕಾರಣಕ್ಕೆ ತಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮುಕಳೆಪ್ಪನ ತಂದೆ ಹನೀಫ್, ತಾಯಿ ಸಮರೀನ್‌ಬಾನು ಹಾಗೂ ಆತನ ಸಹೋದರರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
- Advertisement -