ಡಿಜಿಟಲ್ ಸಂವಹನದ ಜಗತ್ತಿನಲ್ಲಿ ಪ್ರತಿದಿನವೂ ಹೊಸ ತಂತ್ರಜ್ಞಾನಗಳು ಬೆಳೆಯುತ್ತಲೇ ಇವೆ. ಆ ಬದಲಾವಣೆಯ ಹೆಜ್ಜೆಗುರುತುಗಳಲ್ಲಿ ಮುಂಚೂಣಿಯಲ್ಲಿರುವ ಅಪ್ಲಿಕೇಶನ್ ಎಂದರೆ WhatsApp. ಈ app ಗೆ ಟಕ್ಕರ್ ನೀಡಲು ಭಾರತ ಮುಂದಾಗಿದೆ. ಭಾರತೀಯ app ಅಭಿವೃದ್ಧಿ ಕಂಪನಿಯಾದ Zoho ತನ್ನ ಹೊಸ ಮೆಸೇಜಿಂಗ್ ಆಪ್ ‘ಅರಟ್ಟೆ’ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದರೊಂದಿಗೆ ವಾಟ್ಸಾಪ್‌ಗೆ ತೀವ್ರ ಸ್ಪರ್ಧೆ ಸೃಷ್ಟಿಯಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಆರಂಭಿಸಿದ್ದರು.ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶೀಯ ಉತ್ಪನ್ನಗಳ ಬಳಕೆ ಪ್ರೋತ್ಸಾಹಿಸುವ ‘ಆತ್ಮನಿರ್ಭರ ಭಾರತ್’ ಆಂದೋಲನಕ್ಕೆ ಬೆಂಬಲ ನೀಡಿದ್ದರು. ಇದರ ಭಾಗವಾಗಿ Zoho ಕಂಪನಿಯು ಸಣ್ಣ –ಮಧ್ಯಮ ಉಪಯೋಗದಾಳುಗಳನ್ನು ಗುರಿಯಾಗಿಸಿಕೊಂಡು ‘ಅರಟ್ಟೆ’ ಆಪ್‌ನ್ನು ಅಭಿವೃದ್ಧಿಪಡಿಸಿದೆ. ಗೂಗಲ್, ಮೈಕ್ರೋಸಾಫ್ಟ್‌ಗೆ ನಡುಕ ಉಂಟಾಗಿದೆ.
ಈಗ ಅರಟ್ಟೆ ಅಪ್ಲಿಕೇಶನ್ ವಾಟ್ಸ್ ಅಪ್ ಗೂ ಕೂಡ ಸೆಡ್ಡು ಹೊಡೆದಿದೆ. ಇದುವರೆಗೆ ಬರೋಬ್ಬರಿ 3.5 ಲಕ್ಷ ಬಳಕೆದಾರರು ಇದನ್ನು ಇನ್ಸಾಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವಿಶೇಷ ಎಂದರೆ 100 ಪಟ್ಟು ಹೆಚ್ಚು ಬೆಳವಣಿಗೆಯನ್ನು ಈ ಆಪ್ ಕಂಡಿದ್ದು, ಭಾರತದ ಟೆಕ್ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಅರಟ್ಟೆ ಹೊಸ ಬಿರುಗಾಳಿ ಎಬ್ಬಿಸಿದೆ. ಇನ್ನು ಈ app ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ app ಸ್ಟೋರ್‌ನಲ್ಲಿ ಸಾಮಾಜಿಕ ನೆಟ್‌ವರ್ಕಿಂಗ್ ವರ್ಗದಲ್ಲಿ ಮೊದಲ ಸ್ಥಾನ ಪಡೆದಿದೆ.
ಅರಟ್ಟೆ ಹೆಸರು ಬಂದಿದ್ದು ಹೇಗೆ.? ಅನ್ನೋದನ್ನ ನೋಡೊದಾದ್ರೆ ಹರಟೆ ಹೊಡೆಯುವುದನ್ನು ತಮಿಳಿನಲ್ಲಿ ಅರಟ್ಟೆ ಎಂದು ಕರೆಯಲಾಗುತ್ತದೆ. ಇದೇ ಹೆಸರನ್ನ ಡಿಜಿಟಲ್ ಹರಟೆಗೆ ಸಹಾಯ ಮಾಡುವ app ಗೆ ಇಡಲಾಗಿದೆ. ಅರಟ್ಟೆ ಆಪ್‌ನಲ್ಲಿ ಪಠ್ಯ ಸಂದೇಶ, ವಾಯ್ಸ್ ಮತ್ತು ವೀಡಿಯೋ ಕರೆ, ಫೈಲ್ ಹಂಚಿಕೆ ಸೇರಿದಂತೆ ಬಹುತೇಕ ವಾಟ್ಸಾಪ್‌ನ ಎಲ್ಲಾ ವೈಶಿಷ್ಟ್ಯಗಳು ಲಭ್ಯವಿವೆ. ಇದಲ್ಲದೆ, ಡೇಟಾ ಪ್ರೈವಸಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬಳಕೆದಾರರ ದತ್ತಾಂಶವನ್ನು ದೇಶೀಯ ಸರ್ವರ್‌ಗಳಲ್ಲಿ ನಿರ್ವಹಿಸಲಾಗುತ್ತದೆ.
ಈ ಹಿಂದೆಲ್ಲ ಮೀಟಿಂಗ್ ಗಾಗಿ ಗೂಗಲ್ ಮೀಟ್ ಬಳಸಲಾಗುತ್ತಿತ್ತು. ಆದ್ರೆ ಬಳಕೆದಾರರು ಅರಟ್ಟೆ ಆಪ್‌ನಲ್ಲಿಯೇ ಆನ್‌ಲೈನ್ ಮೀಟಿಂಗ್ ನಡೆಸಬಹುದು. ಅಪ್ಲಿಕೇಶನ್‌ನಲ್ಲಿ ವೈಯಕ್ತಿಕ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಹೊಸ ಆಯ್ಕೆ ನೀಡಲಾಗಿದೆ. ಅರಟ್ಟೆ ಆಪ್‌ನ ಟಿವಿ ಆವೃತ್ತಿಯು ಬಳಕೆದಾರರಿಗೆ ತಮ್ಮ ಟಿವಿಯಲ್ಲಿಯೇ ಮೆಸೇಜಿಂಗ್ ಅನುಭವ ಒದಗಿಸುತ್ತದೆ.
ಕೇಂದ್ರ ಸರ್ಕಾರದ ಪ್ರೋತ್ಸಾಹದಿಂದ, ಅರಟ್ಟೆ ಆಪ್ ‘ಮೇಡ್ ಇನ್ ಇಂಡಿಯಾ’ ಅಭಿಯಾನದ ಪ್ರಮುಖ ಭಾಗವಾಯಿತು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ದೇಶೀಯ ಆ್ಯಪ್‌ಗಳ ಬಳಕೆ ಬಗ್ಗೆ ಆಹ್ವಾನ ನೀಡಿದ ನಂತರ, ಅರಟ್ಟೆಯಂತಹ ಆ್ಯಪ್‌ಗಳು ಹೆಚ್ಚು ಗಮನ ಸೆಳೆಯುತ್ತಿವೆ. Zoho ಕಂಪನಿಯಿಂದ ಬಿಡುಗಡೆಗೊಂಡಿರುವ ‘ಅರಟ್ಟೆ’ ಆಪ್ ಭಾರತೀಯ ಡಿಜಿಟಲ್ ಸಂವಹನ ಕ್ಷೇತ್ರದಲ್ಲಿ ಹೊಸ ಬಿರುಸು ತಂದಿದ್ದು, ವಾಟ್ಸಾಪ್‌ಗೆ ತೀವ್ರ ಸ್ಪರ್ಧೆಯ ಮಾದರಿಯಾಗಿದೆ. ದತ್ತಾಂಶದ ಭದ್ರತೆ, ದೇಶೀಯ ತಂತ್ರಜ್ಞಾನ, ಹಾಗೂ ವಿವಿಧ ವೈಶಿಷ್ಟ್ಯಗಳೊಂದಿಗೆ ಇದು ಭವಿಷ್ಯದಲ್ಲಿ ಪ್ರಮುಖ ಆಪ್ ಆಗಿ ಬೆಳೆವ ಸಾಧ್ಯತೆಯಿದೆ.
ವರದಿ : ಲಾವಣ್ಯ ಅನಿಗೋಳ




