Sunday, October 5, 2025

Latest Posts

ಹೊಸ ಪಕ್ಷ, ಹೊಸ ಸರ್ಕಾರ 1, JCB ಗೆ ಯತ್ನಾಳ್ ಪೂಜೆ – ರಾಜ್ಯದಲ್ಲಿ ಬುಲ್ಡೋಜರ್ ಸರ್ಕಾರ?

- Advertisement -

ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ ಪಕ್ಷವನ್ನು ರಚಿಸುವ ಬಗ್ಗೆ ಅವರು ನೀಡಿರುವ ಎಚ್ಚರಿಕೆ, ಮತ್ತು ತಮ್ಮ ನೇತೃತ್ವದಲ್ಲೇ ಸರ್ಕಾರ ರಚನೆಯಾಗಲಿದೆ ಎಂಬ ಆತ್ಮವಿಶ್ವಾಸದ ಅಭಿವ್ಯಕ್ತಿ, ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತಿದೆ.

ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲಿದ್ದರೆ, ಭಗವಾ ಝಂಡ ಪಕ್ಷ ಕಟ್ಟುವುದಾಗಿ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದಾರೆ. ನನ್ನ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಕರ್ನಾಟಕದಲ್ಲಿ ಯೋಗಿ ಆದಿತ್ಯನಾಥ್ ಮಾದರಿಯ ಬುಲ್ಡೋಜರ್ ಸರ್ಕಾರ ಆಡಳಿತ ನಡೆಸಲಿದೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮದಬಾವಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಯತ್ನಾಳ್ ಮಾತನಾಡಿದ್ದಾರೆ. ಹೊಸ ಭಗವಾ ಝಂಡಾ ಪಕ್ಷ ರಚಿಸುವ ಬಗ್ಗೆ ಸೂಚನೆ ನೀಡಿದ್ದು, ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ನನ್ನ ನೇತೃತ್ವದಲ್ಲೇ ಸರ್ಕಾರ ರಚನೆಯಾಗಲಿದೆ. ಪ್ರಮಾಣವಚನ ದಿನ 11 ಜೆಸಿಬಿಗಳಿಗೆ ಪೂಜೆ ಮಾಡುತ್ತೇನೆ. ಕರ್ನಾಟಕದಲ್ಲಿ ಯೋಗಿ ಆದಿತ್ಯನಾಥ್ ಮಾದರಿಯ ಬುಲ್ಡೋಜರ್ ಸರ್ಕಾರ ಆಡಳಿತ ನಡೆಸಲಿದೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ. ಈ ಮಾತುಗಳಿಂದ ಅವರ ಮುಂದಿನ ರಾಜಕೀಯ ಹೆಜ್ಜೆಗಳು ಗಂಭೀರವಾಗಿರಬಹುದು ಎಂಬ ಚರ್ಚೆಗಳು ಎದ್ದಿವೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss