Tuesday, October 14, 2025

Latest Posts

ನಾನು ಇಲ್ಲದೆ ಹೋಗಿದ್ರೆ 4 ಯುದ್ಧಗಳು ಆಗ್ತಿತ್ತು!

- Advertisement -

ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ನಡೆಬಹುದಾಗಿದ್ದ ಯುದ್ಧವನ್ನ ನಾನೇ ನಿಲ್ಲಿಸಿದ್ದು ಅಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿಕೊಂಡಿದ್ದಾರೆ. ತಮ್ಮ ಸುಂಕ ಮತ್ತು ವ್ಯಾಪಾರ ನೀತಿಗಳೇ ಪ್ರಮುಖ ಅಸ್ತ್ರಗಳಾದವು ಎಂದು ಅವರು ಹೇಳಿದ್ದಾರೆ.

ಸುಂಕಗಳು ಕೇವಲ ಆರ್ಥಿಕ ಉಪಕರಣವಲ್ಲ, ಶಾಂತಿಯ ಅಸ್ತ್ರಗಳು ಎಂದು ಸೋಮವಾರ ಓವಲ್ ಕಚೇರಿಯಲ್ಲಿ ಟ್ರಂಪ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ಭವಿಸಿದ ‘ಆಪರೇಷನ್ ಸಿಂಧೂರ್’ ಯುದ್ಧಾಭಾಸದ ಸಂದರ್ಭವನ್ನು ಉಲ್ಲೇಖಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುನರುಚ್ಛರಿಸಿದ್ದಾರೆ.

ಸುಂಕಾಸ್ತ್ರ ಹಾಗೂ ವ್ಯಾಪಾರ ಒತ್ತಡ ಪ್ರಮುಖ ಪಾತ್ರ ವಹಿಸಿತು ಎಂದು ಹೇಳಿದ್ದಾರೆ. ನನಗೆ ಸುಂಕ ವಿಧಿಸುವ ಅಧಿಕಾರವಿಲ್ಲದಿದ್ದರೆ ಕನಿಷ್ಠ ನಾಲ್ಕು ಯುದ್ಧಗಳು ನಡೆಯುತ್ತಿದ್ದವು. ನಾನು ಯುದ್ಧಗಳನ್ನು ನಿಲ್ಲಿಸಲು ಸುಂಕಗಳನ್ನು ಬಳಸುತ್ತೇನೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ನಮ್ಮ ವ್ಯಾಪಾರ ಮತ್ತು ಸುಂಕಕ್ಕೆ ಸಂಬಂಧಿಸಿದ ಹಸ್ತಕ್ಷೇಪವು ಉದ್ವಿಗ್ನತೆಯನ್ನು ಕಡಿಮೆ ಮಾಡಿತು ಎಂದು ಹೇಳಿದ್ದಾರೆ.

ಅಮೆರಿಕ ತನ್ನ ಸುಂಕ ನೀತಿಗಳ ಮೂಲಕ ಶತಕೋಟಿ ಡಾಲರ್ ಗಳಿಸಿದೆ ಮತ್ತು ಆರ್ಥಿಕವಾಗಿ ಬಲಿಷ್ಠವಾಗಿದ್ದು ಮಾತ್ರವಲ್ಲ, ಜಾಗತಿಕ ಶಾಂತಿಗೆ ಸಹಾಯ ಮಾಡುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಈ ವರ್ಷದ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ, ಭಾರತವು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವಿನ ಯುದ್ಧದ ಭೀತಿ ಗಂಭೀರವಾಗಿತ್ತು.

ಭಾರತ ಮತ್ತು ಪಾಕಿಸ್ತಾನ ದಾಳಿಗೆ ಸಿದ್ಧರಾಗಿದ್ದರು. ಹಲವು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಆದರೆ ನಾನು ಸುಂಕಗಳ ಮೂಲಕ ಒತ್ತಡ ಹೇರಿದೆ, ನನ್ನ ಸೂಚನೆ ಪರಿಣಾಮಕಾರಿಯಾಗಿತ್ತು. ಹೀಗಾಗಿ ಯುದ್ಧ ನಿಲ್ಲಿಸಿದರು ಎಂದಿದ್ದಾರೆ. ಸುಂಕಗಳು ಅಮೆರಿಕಕ್ಕೆ ಬಹಳ ಮುಖ್ಯ. ಈ ಸುಂಕ ಹೇರಿಕೆಯಿಂದಾಗಿ ನಾವು ನೂರಾರು ಶತಕೋಟಿ ಡಾಲರ್‌ಗಳ ಆದಾಯ ಬಂದಿದೆ. ಇದು ದೇಶವನ್ನು ಶ್ರೀಮಂತವಾಗಿಸಿದೆ. ಸುಂಕಗಳಿಂದಾಗಿ ನಾವು ಶಾಂತಿಪಾಲಕರಾಗಿದ್ದೇವೆ ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss