Tumakuru News: ತುಮಕೂರು: ಸಿಜೆಐ ಗವಾಯಿ ಅವರ ಮೇಲೆ ವಕೀಲನಿಂದ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಮಧುಗಿರಿಯಲ್ಲಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದ್ದು, ಖಂಡನೆ ವ್ಯಕ್ತಪಡಿಸಿದ್ದಾರೆ.
ಮುಖ್ಯ ನ್ಯಾಯ ಮೂರ್ತಿಗೆ ಶೂ ಎಸೆಯುತ್ತಾನೆ ಅಂದ್ರೆ ಇದು ನಮ್ಮ ದೇಶ ಎಲ್ಲಿಗೆ ಹೋಗ್ತಿದೆ ಎಂಬ ದಿಕ್ಸೂಚಿ. ಸುಪ್ರಿಂ ಕೋರ್ಟ್ನ ಮುಖ್ಯ ನ್ಯಾಯದೀಶರ ಮುಂದೆ ಅನುಚಿತವಾಗಿ ವರ್ತಿಸಿರುವ ಸನಾತನವಾದಿ ನ್ಯಾಯವಾದಿಯ ಕ್ರಮವನ್ನ ಇಡೀ ದೇಶ ಖಂಡಿಸುಂತಹ ಸಂದರ್ಭ. ನಾನು ಕೂಡ ಈ ಕ್ರಮವನ್ನ ಖಂಡಿಸುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ.
ಇವತ್ತು ಕೂಡ ನಾನು ಪತ್ರಿಕೆಯಲ್ಲಿ ನೋಡಿದೆ. ನಾನು ಮಾಡಿರುವ ಕೃತ್ಯಕ್ಕೆ ವಿಷಾದ ವ್ಯಕ್ತ ಪಡಿಸುವುದಿಲ್ಲ ಎಂದಿದ್ದಾನೆ. ನಾನು ಜೈಲಿಗೆ ಹೋಗಲಿಕ್ಕೂ ಸಿದ್ದ ಎಂಬ ಕಠೋರ ಮನಸ್ಸಿನ ವಿಕೃತ ಮನಸ್ಸಿನ ನ್ಯಾಯವಾದಿಯ ವಿರುದ್ದ ಪೊಲೀಸರು ಸುಮೋಟೊ ಕೆಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ.
ಗವಾಯಿ ಯವರು ಅವರ ಉತ್ತಮ ನಡವಳಿಕೆಯಿಂದ ವಿದ್ವತ್ತಿನಿಂದ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ ಆಗಿದ್ದಾರೆ. ಇದು ಯಾವುದೇ ರಾಜಕೀಯದಿಂದ ನೇಮಕಾತಿಯಲ್ಲ. ಅವರ ಸಾಮರ್ಥ್ಯ, ಅವರಲ್ಲಿರುವ ವಿದ್ವತ್ ನ್ನ ಗುರ್ತಿಸಿ ನ್ಯಾಯಲಯದ ಕೊಲಿಜಿಯಂ ಆಯ್ಕೆ ಮಾಡಿ ನೇಮಕ ಮಾಡಿದೆ. ಅಂತಹ ಒಬ್ಬ ಉತ್ತಮ ಗುಣಮಟ್ಟದ ನಡವಳಿಕೆಯ ವ್ಯಕ್ತಿಯನ್ನ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಒಂದೇ ಕಾರಣ ಇಟ್ಕೊಂಡು. ಸನಾತನವಾದಿಗಳು ಶೂ ಎಸೆಯೋದು, ಅಗೌರವ ತೋರೊದು, ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಕರಾಳ ಛಾಯೆ ಎಂದು ಈ ಘಟನೆಯನ್ನ ಖಂಡಿಸುತ್ತೇನೆ ಎಂದು ಮಾಜಿ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ ಸನಾತನವಾದಿ ಇನ್ನೂ ಕೂಡ ಘಟನೆಗೆ ವಿಷಾದ ವ್ಯಕ್ತ ಪಡಿಸುವ ವಿಶಾಲ ಹೃದಯವಿಲ್ಲದ ಕಠೋರ ವ್ಯಕ್ತಿಯನ್ನು ಕೂಡಲೇ ಬಂದಿಸಬೇಕು, ಕಾನೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ಇದು ಸೂಚನೆ ಈ ದೇಶದ ಸನಾತನವಾದಿಗಳು ಏನಿದ್ದಾರೆ. ಸನಾತನವಾದಿಯ ಧೈರ್ಯ ಮೆಚ್ಚಬೇಕು. ಸುಪ್ರಿಂ ಕೋರ್ಟ್ ನ್ಯಾಯದೀಶರ ಮುಂದೆ, ವಕೀಲನಾಗಿ ಶೂ ಎಸೆಯುತ್ತಾನೆ ಅಂತಾ ಹೇಳಿದ್ರೆ. ಮುಂದೆ ನಮ್ಮ ದೇಶ ಎಲ್ಲಿಗೆ ಹೋಗುತ್ತೆ ಎಂಬ ದಿಕ್ಸೂಚಿಯನ್ನ ನಾವು ಭಾವಿಸಬೇಕಾಗುತ್ತೆ. ಕೆಲವು ಜನ ಯಾರ ಮಾತನ್ನ ಕೇಳದೆ ಇರೋರು ಇರ್ತಾರೆ..ಯಾರೇನೂ ಹೇಳಲಿಕ್ಕೆನು ಆಗೊದಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.
ಆತನಿಗೆ 70-71 ವರ್ಷ ವಯಸ್ಸಾಗಿದೆ, ವಕೀಲ ವೃತ್ತಿಯಲ್ಲಿ 40 ವರ್ಷನಾದ್ರೂ ಅನುಭವ ಇರುತ್ತದೆ. ಆತನ ಕೂಡ ಸುಪ್ರೀಂ ಕೋರ್ಟ್ ನ ನ್ಯಾಯವಾದಿಯಾಗಿ ಈ ರೀತಿಯ ಕೃತ್ಯ ಎಸಗುತ್ತಾನೆ ಅಂದ್ರೆ. ನಂಬಲಿಕ್ಕೆ ಆಗ್ತಿಲ್ಲ ಆ ರೀತಿಯ ಘಟನೆ ಎಂದು ಭಾವಿಸುತ್ತೆನೆ. ಮತ್ತೆ ಈತನ ಹಿಂದೆ ಯಾರಿದ್ದಾರೆ ಇಲ್ಲಾ ಎಂದು ನಾನು ಹೇಳಲಿಕ್ಕೆ ಹೋಗೊದಿಲ್ಲ. ಆದ್ರೆ ಸನಾತನವಾದಿಗಳು ಸನಾತನ ಧರ್ಮದಿಂದ ಪ್ರೇರಣೆಯಾಗಿ ಈ ರೀತಿ ಮಾಡಿರಬಹುದು ಅಂತಾ ಅಭಿಪ್ರಾಯ ಎಂದು ರಾಜಣ್ಣ ಹೇಳಿದ್ದಾರೆ.
ಆತ ದೇವಸ್ಥಾನದಲ್ಲಿ ವಿಷ್ಣು ವಿಗ್ರಹ ಸ್ಥಾಪನೆ ಬಗ್ಗೆ ಒಂದು ಪಿಐಎಲ್ ಹಾಕಿಕೊಂಡಿರ್ತಾನೆ. ಅವರು ಆ ಸ್ಥಳ ಪುರಾತತ್ತ್ವ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ. ಆದೇಶ ಬರೆದಿಲ್ಲ, ಅಭಿಪ್ರಾಯ ವ್ಯಕ್ತ ಪಡಿಸಿದ್ದಕ್ಕೆ. ಈತ ಸನಾತನ ಧರ್ಮಕ್ಕೆ ವಿರುದ್ದ ಇದ್ದಾನೆ, ದಲಿತ ಇದ್ದಾನೆ ಎಂದು. ದಲಿತರು ಎಂದ ಕೂಡಲೇ ಸನಾತನವಾದಿಗಳ ವಿರುದ್ದ ಇದ್ದಾರೆ ಎಂಬ ಕಲ್ಪನೆ ಈ ದೇಶದಲ್ಲಿದೆ. ಆ ಒಂದು ಕಲ್ಪನೆಯಲ್ಲಿ ಈ ವಕೀಲ ನ್ಯಾಯಾದೀಶರಿಗೆ ಇಂತಹ ಕೃತ್ಯ ಎಸಗಿದ್ದಾನೆ ಎಂದು ಭಾವಿಸುತ್ತೇನೆ ಎಂದು ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.