25 ವರ್ಷಗಳ ಅಧೀನದಲ್ಲಿ ಸದೃಢ ಸ್ಥಾನ ಪಡೆದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ, ನೂತನ ಚುನಾವಣೆಗೆ ನಾಮಪತ್ರ ಸಲ್ಲಿಸಿ ಹೋರಾಟವನ್ನ ಘೋಷಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿಗೆ ನಿಮ್ಮ ‘ಅಶ್ವಮೇಧ ಯಾಗದ ಕುದುರೆ’ಯನ್ನು ಕಟ್ಟಿಹಾಕುವುದಾಗಿ ಸವಾಲು ಎಸೆದಿದ್ದಾರೆ. ನಾನು 40 ವರ್ಷಗಳಿಂದ ಬ್ಯಾಂಕ್ ಸೇವೆಯಲ್ಲಿ ತೊಡಗಿದ್ದೇನೆ. 25 ವರ್ಷ ಅಧ್ಯಕ್ಷರಾಗಿದ್ದು, ಈ ಬಾರಿ ಮತ್ತೆ ಗೆಲ್ಲುವುದಕ್ಕೆ ಭರವಸೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಕತ್ತಿ, ತಮ್ಮ ಬೆಂಬಲಿಗರ ದೊಡ್ಡ ಸಂಖ್ಯೆಯನ್ನು ಶಕ್ತಿ ಪ್ರದರ್ಶನ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ ಎಂದಿದ್ದಾರೆ. ನಮ್ಮ PKPS ಸದಸ್ಯರು ಬ್ಯಾಂಕ್ ನಿಗಾ ಮಾಡಬೇಕು ಎಂದು ಕೇಳಿದ ಕಾರಣ ಅವರೊಂದಿಗೆ ಬಂದಿದ್ದೇನೆ. ಇದು ಶಕ್ತಿ ಪ್ರದರ್ಶನವಲ್ಲ ಎಂದು ವಿವರಣೆ ನೀಡಿದರು.
ನಾನು ಡಿಸಿಸಿ ಬ್ಯಾಂಕ್‌ನಲ್ಲಿ 40 ವರ್ಷದಿಂದ ಇದ್ದೇನೆ. ಇದರಲ್ಲಿ 25 ವರ್ಷ ನಾನೇ ಅಧ್ಯಕ್ಷನಾಗಿದ್ದೇನೆ. ಪ್ರತಿಬಾರಿಯಂತೆ ಈ ಬಾರಿಯೂ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಅಗ್ರೆಸಿವ್ ಆಗಿದ್ದೇನೆ. ಬಾಲಚಂದ್ರ ಜಾರಕಿಹೊಳಿ ಅವರ ‘ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕುತ್ತೇವೆ’ ಎಂದು ಮಾಜಿ ಸಂಸದ ರಮೇಶ್ ಕತ್ತಿ ಸವಾಲು ಹಾಕಿದರು.
ಡಿಸಿಸಿ ಬ್ಯಾಂಕ್ ಜೊತೆಗಿನ ತಮ್ಮ ನಂಟು ಮತ್ತು ಸುದೀರ್ಘ ಸೇವೆಯನ್ನು ಸ್ಮರಿಸಿದ ರಮೇಶ್ ಕತ್ತಿ, ‘ಈಗ 9ನೇ ಬಾರಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಸುದೀರ್ಘವಾಗಿ 40 ವರ್ಷ ಡಿಸಿಸಿ ಬ್ಯಾಂಕಿನಲ್ಲಿದ್ದೇನೆ. 10 ವರ್ಷ ನಿರ್ದೇಶಕ, 5 ವರ್ಷ ಉಪಾಧ್ಯಕ್ಷ ಮತ್ತು 25 ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವೆ. ಇದು ಇಡೀ ರಾಜ್ಯದಲ್ಲೆ ಒಂದು ರೀತಿ ದಾಖಲೆ ಆಗಿದೆ ಎಂದು ಹೆಮ್ಮೆಯಿಂದ ಹೇಳಿದರು. ಇದು ಜಿಲ್ಲೆಯ ಜನರ, ಸಹಕಾರಿಗಳ ಮತ್ತು ಸಿಬ್ಬಂದಿಗಳ ಸಹಕಾರದಿಂದ ಸಾಧ್ಯವಾಯಿತು ಎಂದು ಕೃತಜ್ಞತೆ ಸಲ್ಲಿಸಿದರು.
ಇಂದು ಹುಕ್ಕೇರಿ ವಿದ್ಯುತ್ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಗಿಸಿ ಇಲ್ಲಿಗೆ ಬಂದಿದ್ದೇನೆ. ವಿದ್ಯುತ್ ಸಂಘದ ಚುನಾವಣೆ ಬಳಿಕ ಇಲ್ಲೂ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತೇವೆ. ಸಂಸ್ಥೆಯ ಅಧಿಕಾರ ಒಳ್ಳೆಯವರ ಕೈಯಲ್ಲಿ ಇರಬೇಕು. ಯಾರ ಕೈಗೆ ಅಧಿಕಾರ ಕೊಟ್ಟರೆ ಒಳ್ಳೆಯದು ಎನ್ನುವುದನ್ನು ಜಿಲ್ಲೆಯ 50 ಲಕ್ಷ ಜನರು ನಿರ್ಣಯಿಸುತ್ತಾರೆ. ಬ್ಯಾಂಕ್ ಸಂಕಷ್ಟದಲ್ಲಿದ್ದಾಗ ನಾನು ಅಧ್ಯಕ್ಷನಾಗಿದ್ದೆ, ಈಗ ಸುಸ್ಥಿತಿಯಲ್ಲಿದೆ ಎಂದು ನಾಯಕತ್ವವನ್ನು ಸಮರ್ಥಿಸಿಕೊಂಡರು.
ವರದಿ : ಲಾವಣ್ಯ ಅನಿಗೋಳ