Sandalwood: ನಟ ರಘು ಶಿವಮೊಗ್ಗ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿಜರ್ನಿ ಬಗ್ಗೆ ವಿವರಿಸಿದ್ದಾರೆ. ಅವರಿಗೆ ಬಿಗ್‌ಬಾಸ್‌ಗೆ ಹೋಗುವ ಅವಕಾಶ ಸಿಕ್ಕರೆ ಹೋಗುತ್ತಾರಾ ಅನ್ನೋ ಪ್ರಶ್ನೆಗೆ ರಘು ಉತ್ತರಿಸಿದ್ದಾರೆ.
ಬಿಗ್‌ಬಾಸ್‌ಗೆ ಹೋಗುವ ಅವಕಾಶ ಸಿಕ್ಕರೆ ಹೋಗ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ರಘು, ಇಲ್ಲ ನಾನು ಹೋಗೋದಿಲ್ಲ. ನನ್ನ ವ್ಯಕ್ತಿತ್ವ ಈಗಲೂ ಜನಗಳ ಮುಂದೆ ಇದೆ. ಅಲ್ಲಿ ಹೋದರೆ ಮಾತ್ರ ಜನಗಳ ಮುಂದೆ ವ್ಯಕ್ತಿತ್ವ ಕಟ್ಟಿಕ“ಂಡ ಹಾಗಲ್ಲ. ನಾನು ಅಲ್ಲಿ ಫಿಟ್ ಆಗಲ್ಲ ಎಂದು ರಘು ಹೇಳಿದ್ದಾರೆ.
ಇನ್ನು ತಮ್ಮ ಬಗ್ಗೆ ಪ್ಲಸ್-ಮೈನಸ್ ಹೇಳಿ ಎಂದಾಗ ಉತ್ತರಿಸಿದ ರಘು, ಪ್ಲಸ್ ಜನ ಹೇಳಲಿ, ಮೈನಸ್ ನಾನು ಹೇಳುತ್ತೇನೆ. ನನಗೆ ತಾಳ್ಮೆ ಕಡಿಮೆ ಎಂದಿದ್ದಾರೆ. ರಘು ನಿರ್ದೇಶಕರೂ ಆಗಿರುವುದರಿಂದ, ಅವರಿಗೆ ತಾಳ್ಮೆ ಕಡಿಮೆಯಂತೆ. ಹೇಳಿದ ಸಮಯಕ್ಕೆ ಸರಿಯಾಗಿ ಶೂಟಿಂಗ್ ಬರಲಾಗದಿದ್ದರೆ, ಕಲಾವಿದರಿಗೆ ರಘು ಹಿಗ್ಗಾಮುಗ್ಗಾ ಬೈಯ್ಯುತ್ತಾಾರಂತೆ ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.