Sandalwood: ನಟ, ನಿರ್ದೇಶಕ ರಘು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ರಘು ಅವರು ತುಂಬಾ ದುಬಾರಿನಾ ಅನ್ನೋ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ.
ರಘು ಅವರು ತುಂಬಾ ದುಬಾರಿನಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ರಘು, ಅಲ್ಲಾ ನಾನು ದುಬಾರಿ ಅಲ್ಲಾ, ಸಿಂಪಲ್ ಅಂತಾರೆ. ಈ ಬಗ್ಗೆ ಮಾತು ಮುಂದುವರಿಸಿದ ರಘು, ನಾವು ಸುಮ್ಮನ ದುಡ್ಡು ಕೇಳುವುದಿಲ್ಲ. ಪಾತ್ರ ಚೆನ್ನಾಗಿರದಿದ್ದಾಗ, ನಾವು ತುಂಬ ಕೇಳುತ್ತೇವೆ. ಆದರೆ ಅಷ್ಟು ಹಣ ನೀಡಿಯೂ ಪಾತ್ರ ಮಾಡಲು ಹೇಳಿದವರಿದ್ದಾರೆ. ಬದುಕು ಅನಿವಾರ್ಯ ಅಂದಾಗ, ಹಾಗೆ ಮಾಡಬೇಕಾಗುತ್ತದೆ ಅಂತಾರೆ ರಘು.
ನಟ ದುನಿಯಾ ವಿಜಿ ಬಗ್ಗೆ ಮಾತನಾಡಿರುವ ರಘು, ಸಲಗ ಸಿನಿಮಾದಲ್ಲಿ ವಿಜಿ ಸರ್ ಕೆಲವು ಸಮಯ ಮಾತ್ರ ಸ್ಕ್ರೀನ್ ಮೇಲೆ ಬರ್ತಾರೆ. ಈ ಮೂಲಕ ಅವರು ಬೇರೆ ಪಾತ್ರಗಳು ಮಿಂಚಲು ಅವಕಾಶ ನೀಡಿದ್ದಾರೆ ಎಂದು ನೆನೆಸಿಕ“ಂಡಿದರು. ಅಲ್ಲದೇ ರಘು ವಿಜಿ ಸಿನಿಮಾಗ ೆನಿರ್ದೇಶನ ಮಾಡಲು ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಅರ್ಧಕ್ಕೆ ನಿಂತಿತು. ಬಳಿಕ ವಿಜಿ ನಿರ್ದೇಶನದ ಮಾಡುವ ಸಿನಿಮಾದಲ್ಲಿ ನಟಿಸಲು ರಘು ಅವರಿಗೆ ಅವಕಾಶ ಸಿಕ್ಕಿತಂತೆ. ಈ ಬಗ್ಗೆ ಅವರೇ ಮಾತನಾಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.