Tuesday, October 14, 2025

Latest Posts

ರಾಜಕೀಯದ ನಿಜ ಚಿತ್ರಣ ಬಿಹಾರ ಎಲೆಕ್ಷನ್ ನಂತರ ಸ್ಪಷ್ಟವಾಗತ್ತೆ ಎಂದ ಕೆ.ಎನ್ ರಾಜಣ್ಣ!

- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮಂತ್ರಿಗಿರಿ ಸಿಗಬಹುದು. ಅವರ ಬಗ್ಗೆ ನನಗೆ ವಿಶ್ವಾಸ ಇದೆ. ಸಿದ್ದರಾಮಯ್ಯನವರ ಮಂತ್ರಿಗಿರಿ ಮತ್ತು ರಾಜಕೀಯ ಭವಿಷ್ಯದ ಬಗ್ಗೆ ಕೆ.ಎನ್. ರಾಜಣ್ಣ ಪರೋಕ್ಷವಾಗಿ ಹೇಳಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿನಾಡಿದ್ದಾರೆ. ಬಿಹಾರ ಚುನಾವಣೆ ತನಕ ಸುಮ್ಮನೆ ಇದ್ದು ಬಿಡಿ, ಎಲ್ಲವೂ ಅದಾದ ಮೇಲೆ ಸ್ಪಷ್ಟವಾಗಲಿದೆ ಎಂದು ಹೇಳುವ ಮೂಲಕ ರಾಜಕೀಯದ ಮರ್ಮ ಸ್ಪಷ್ಟಪಡಿಸಿದರು.

ಬಿಹಾರ ಎಲೆಕ್ಷನ್‌ವರೆಗೂ ಸುಮ್ಮನೆ ಇದ್ದು ಬಿಡಿ, ಬಿಹಾರ ಎಲೆಕ್ಷನ್ ಕಳೆದು ಹೋಗಲಿ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಅವರ ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾನು ಮಂತ್ರಿ ಸ್ಥಾನ ಕೊಡಿ ಅಂತ ಕೇಳಿರಲಿಲ್ಲ.

2018ರಲ್ಲಿ ನಾನು ಸೋತಾಗ ಸಿಎಂ ಸಿದ್ದರಾಮಯ್ಯ ಹೇಳಿದ್ದರು ನೀನು ಗೆದ್ದರೆ ಮಿನಿಸ್ಟರ್ ಆಗ್ತಿದ್ದೆ ಕಣಯ್ಯಾ, ನಿನ್ನ ಬದಲು ತುಕಾರಂನನ್ನು ಮಾಡಿದೆ ಎಂದು ಹೇಳಿದರು. ಈ ಬಾರಿ ಅವರೇ ಕರೆದು ಸಚಿವ ಸ್ಥಾನ ಕೊಟ್ಟರು ಎಂದಿದ್ದಾರೆ.

ಇನ್ನು ಹೈಕಮಾಂಡ್‌ಗೆ ಸತ್ಯದ ಅರಿವು ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ರಾಜಣ್ಣ ಮಾತನಾಡಿದ್ದಾರೆ. ಎಲ್ಲವೂ ಬಿಹಾರ ಎಲೆಕ್ಷನ್ ಬಳಿಕ ಗೊತ್ತಾಗುತ್ತದೆ. ಈಗ ಯಾವುದೇ ನಿರ್ಧಾರ ಅಥವಾ ತೀರ್ಮಾನಗಳನ್ನು ಮಾಡುವ ಸಮಯವಲ್ಲ ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss