Spiritual: ಹಿಂದೂಗಳಲ್ಲಿ ವಿವಾಹಿತ ಮಹಿಳೆಯರು ಮಾಡುವ ಕೆಲ ತಪ್ಪುಗಳು, ಅವರ ಪತಿಯ ಮೇಲೆ ಪರಿಣಾಮ ಬೀರುತ್ತದೆ ಅಂತಾ ಹೇಳಲಾಗಿದೆ. ಆ ರೀತಿಯಾಗಿ, ಅನುಭವಿಸಿದವರೂ ಹಲವರಿದ್ದಾರೆ. ಹಾಗಾಗಿ ಇದೆಲ್ಲ ಭ್ರಮೆ, ಮೂಢನಂಬಿಕೆ ಅಂತಲೂ ಹೇಳಲಾಗುವುದಿಲ್ಲ. ಹಾಗಾದ್ರೆ ವಿವಾಹಿತ ಮಹಿಳೆಯರು ಮಾಡಬಾರದ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ.
ಮುಸ್ಸಂಜೆಗೆ ಬಟ್ಟೆ ವಾಶ್ ಮಾಡಬೇಡಿ: ಮುಸ್ಸಂಜೆ ವೇಳೆಯಲ್ಲಿ ಮನೆಯಲ್ಲಿ ಎಂದಿಗೂ ಬಟ್ಟೆ ವಾಶ್ ಮಾಡಬಾರದು. ಇದರಿಂದ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ. ಬೆಳಿಗ್ಗೆ ವಾಶ್ ಮಾಡಿ, ಬಿಸಿಲಿಗೆ ಬಟ್ಟೆ ಆರಿಸಬೇಕು. ರಾತ್ರಿ ವೇಳೆ ನಕಾರಾತ್ಮಕ ಶಕ್ತಿಗಳ ಓಡಾಟ ಹೆಚ್ಚಾಗಿರುತ್ತದೆ. ಅಲ್ಲದೇ, ಮುಸ್ಸಂಜೆ ವೇಲೆ ಲಕ್ಷ್ಮೀ ದೇವಿ ಮನೆ ಪ್ರವೇಶಿಸುವ ಸಮಯ. ಅಸ್ತು ದೇವತೆಗಳು ತಿರುಗಾಡುವ ಸಮಯ. ಹಾಗಾಗಿ ಮುಸ್ಸಂಜೆ ಬಟ್ಟೆ ಸ್ವಚ್ಛ ಮಾಡಿ, ರಾತ್ರಿ ನೀವು ಆರಿಸಿದರೆ, ನಿಮ್ಮ ಜೀವನದಲ್ಲಿ ನೆಮ್ಮದಿ ಬರಲು ಸಾಧ್ಯವೇ ಇಲ್ಲ. ಕೆಲಸ ಬೇಗ ಬೇಗ ಮುಗಿಸುವುದು ಎಷ್ಟು ಮುಖ್ಯವೋ, ಸರಿಯಾದ ಸಮಯದಲ್ಲಿ ಕೆಲಸವಾಗಿರಬೇಕಾಗುವುದು ಕೂಡ ಅಷ್ಟೇ ಮುಖ್ಯ.
ಹೆಚ್ಚು ನಿದ್ರಿಸಬೇಡಿ, ಆಲಸ್ಯರಾಗಬೇಡಿ: ಹೆಣ್ಣು ಮಕ್ಕಳು ಹೆಚ್ಚು ನಿದ್ರಿಸಿದಷ್ಟು, ಆಲಸ್ಯಭರಿತರಾದಷ್ಟು ಮನೆಯ ಏಳಿಗೆ ಕುಗ್ಗುತ್ತ ಹೋಗುತ್ತದೆ. ಹಾಗಾಗಿ ಆದಷ್ಟು ಆಲಸ್ಯ ದೂರವಿರಿಸಿ, ಮನೆಯಲ್ಲಿ ಲವಲವಿಕೆಯಿಂದ ಇರಬೇಕು.
ಉಗುರನ್ನು ಉದ್ದವಾಗಿ ಬೆಳೆಸಬೇಡಿ: ಇಂದಿನ ಜಾಯಮಾನದಲ್ಲಿ ಫ್ಯಾಷನ್ ಅನ್ನೋದು ಬಹುಮುಖ್ಯವಾಗಿರುವುದಾಗಿದೆ. ಆದರೆ ಅದೇ ಫ್ಯಾಷನ್ ಹೆಸರಲ್ಲಿ ವಿವಾಹಿತೆಯರು ಮಾಂಗಲ್ಯ ಹಾಕುವುದಿಲ್ಲ, ಕುಂಕುಮವಿಡುವುದಿಲ್ಲ. ಉದ್ದೂದ್ದ ಉಗುರು ಬೆಳೆಸುತ್ತಾರೆ. ಇದೆಲ್ಲ ಮನೆಗೆ ದರಿದ್ರ ತರುವ ವಿಷಯ. ಇದನ್ನೆಲ್ಲ ಹಿರಿಯರು ಅರ್ಥವಿಲ್ಲದ್ದಕ್ಕೆ ಬಳಸಿದ್ದಲ್ಲ. ಬದಲಾಗಿ ಇದಕ್ಕೂ ಆರೋಗ್ಯಕ್ಕೂ, ಸಂಬಂಧಕ್ಕೂ, ನೆಮ್ಮದಿಗೂ ಸಂಬಂಧವಿರುವ ಕಾರಣಕ್ಕೆ ಮಾಂಗಲ್ಯ, ಕುಂಕುಮ ಧಾರಣೆ ಎಲ್ಲ ಮಾಡಲಾಗುತ್ತದೆ. ಹಣೆಗೆ ಕುಂಕುಮವಿಡುವುದರಿಂದ ನಮ್ಮ ತಾಳ್ಮೆ,. ಏಕಾಗೃತೆ ಹೆಚ್ಚುತ್ತದೆ.
ಮಂಗಳವಾರ-ಶುಕ್ರವಾರ ಕಣ್ಣೀರು ಹಾಕಬೇಡಿ: ಹೆಣ್ಣು ಮಕ್ಕಳು ಎಂದಿಗೂ ಕಣ್ಣೀರು ಹಾಕಬಾರದು. ಆದರೆ ಮನೆಯಲ್ಲಿ ನಡೆಯುವ ಕಲಹಗಳು ಕಣ್ಣೀರು ತರಿಸುತ್ತದೆ. ಹಾಗಾಗಿ ಆದಷ್ಟು ಮನೆಯಲ್ಲಿ ಮಂಗಳವಾರ, ಶುಕ್ರವಾರ ಕಣ್ಣೀರ ಹಾಕಬೇಡಿ.