Tumakuru News: ಮನೆಮನೆಗೆ ಪೊಲೀಸ್ ಕಾರ್ಯಕ್ರಮದ ವೇಳೆ ಹೆಡ್ ಕಾನ್‌ಸ್ಟೇಬಲ್ ಮೇಲೆ ನಾಯಿ ದಾಳಿ

Tumakuru News: ತುಮಕೂರು: ತುಮಕೂರಿನಲ್ಲಿ ನಾಯಿ ಕಡಿತ ಮಿತಿ ಮೀರಿದ್ದು, ಕರ್ತವ್ಯ ನಿರತ ಹೆಡ್ ಕಾನ್‌ಸ್ಟೇಬಲ್ ಮೇಲೆ ನಾಯಿ ದಾಳಿ ಮಾಡಿದೆ. ತುಮಕೂರು ಗ್ರಾಮಾಂತರದ ಹಿರೇಹಳ್ಳಿ ಪಂಚಾಯಿತಿಯ ಚಿಕ್ಕಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಮನೆಗೆ ಪೊಲೀಸ್ ಕಾರ್ಯಕ್ರಮದ ವೇಳೆ ಹೆಡ್ ಕಾನ್ಸ್ಟೇಬಲ್ ಗೆ ನಾಯಿ ಕಚ್ಚಿದೆ.

ತುಮಕೂರಿನ ಕ್ಯಾಸಂದ್ರ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹನುಮ ರಂಗಯ್ಯ ಎಂಬ ಪೋಲೀಸ್ ಗೆ ನಾಯಿ ಕಡಿದಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

About The Author