Thursday, November 13, 2025

Latest Posts

JDUಗೆ ತೀವ್ರ ಆಘಾತ, RJDಗೆ ಬಲ: ಬಿಹಾರ ರಾಜಕಾರಣದಲ್ಲಿ ಭಾರಿ ಬದಲಾವಣೆ

- Advertisement -

ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮೊದಲು ರಾಜ್ಯ ರಾಜಕಾರಣದಲ್ಲಿ ಭಾರಿ ಕದಲಾಟ ಕಂಡುಬಂದಿದೆ. ಪುರ್ನಿಯಾ ಕ್ಷೇತ್ರದ ಮಾಜಿ ಸಂಸದ ಸಂತೋಷ್ ಕುಶ್ವಾಹ ಸೇರಿದಂತೆ ಹಲವು ಪ್ರಮುಖ ನಾಯಕರು ಇಂದು RJD ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಮಾಜಿ ಸಂಸದ ಸಂತೋಷ್ ಕುಶ್ವಾಹ ಎರಡು ಬಾರಿ ಪುರ್ನಿಯಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರ RJDಗೆ ಸೇರ್ಪಡೆಯಿಂದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ JDU ಪಕ್ಷಕ್ಕೆ ರಾಜಕೀಯವಾಗಿ ದೊಡ್ಡ ಹೊಡೆತ ಎನ್ನಲಾಗುತ್ತಿದೆ.

ಇಂದಿನ ಸಾರ್ವಜನಿಕ ಸಮಾರಂಭದಲ್ಲಿ RJD ಹಿರಿಯ ನಾಯಕರ ಸಮ್ಮುಖದಲ್ಲಿ ಸಂತೋಷ್ ಕುಶ್ವಾಹ ಅವರು, JDU ಸಂಸದ ಗಿರ್ಧಾರಿ ಚಾಣಕ್ಯ ಅವರ ಪುತ್ರ ಪ್ರಕಾಶ್ ರಂಜನ್ ಹಾಗೂ ಮಾಜಿ ಸಂಸದ ಜಗದೀಶ್ ಶರ್ಮಾ ಅವರ ಪುತ್ರ ರಾಹುಲ್ ಶರ್ಮಾ ಸೇರಿದಂತೆ ಹಲವು ನಾಯಕರು JDUಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅನುಭವಿ ನಾಯಕರು ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಭಾವ ಹೊಂದಿರುವವರನ್ನು ಪಕ್ಷ ಸೇರ್ಪಡೆ ಮೂಲಕ ತನ್ನ ಕಾರ್ಯಕರ್ತರನ್ನು ಬಲಪಡಿಸಲು RJD ಕಾರ್ಯತಂತ್ರ ರೂಪಿಸಿದೆ. ಜೆಡಿಯು ಮುಂಬರುವ ಚುನಾವಣೆಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವ ಜವಾಬ್ದಾರಿಯನ್ನು ಬಿಜೆಪಿಗೆ ವಹಿಸಿದೆ.

ಇತರ ಮಿತ್ರಪಕ್ಷಗಳಾದ ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ ಮತ್ತು ಉಪೇಂದ್ರ ಕುಶ್ವಾಹ ಅವರೊಂದಿಗೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ಪಕ್ಷಕ್ಕೆ ವಹಿಸಲಾಗಿದೆ. ಚರ್ಚೆಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಹೇಳಲಾಗಿದೆ. NDA ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಕ್ಟೋಬರ್ 13 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss