Tuesday, October 14, 2025

Latest Posts

ಲಿವ್-ಇನ್ ‘ಫ್ಯಾಷನ್’ ಅಲ್ಲ ಹೆಣ್ಣುಮಕ್ಕಳ ಶೋಷಣೆಗೆ ದಾರಿ ಎಂದ ಆನಂದಿ ಬೆನ್ ಪಟೇಲ್!

- Advertisement -

ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು, ಲಿವ್-ಇನ್ ಸಂಬಂಧಗಳು ಹೆಣ್ಣುಮಕ್ಕಳ ಶೋಷಣೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇರುವುದರಿಂದ, ಯುವತಿಯರು ಅವುಗಳಿಂದ ದೂರವಿರಬೇಕೆಂದು ಪ್ರಬಲ ಎಚ್ಚರಿಕೆ ನೀಡಿದ್ದಾರೆ. ವಾರಣಾಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ 47ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪದವಿ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪ್ರಮಾಣಪತ್ರ ವಿತರಿಸಿದ್ದಾರೆ. ಸಮಾಜದಲ್ಲಿ ಹೆಚ್ಚುತ್ತಿರುವ ಮಹಿಳಾ ಶೋಷಣೆಯ ಕುರಿತು ಗಂಭೀರ ಸಂದೇಶ ನೀಡಿದ್ದಾರೆ.

ಇತ್ತೀಚೆಗೆ ನಾನೇ ನೋಡಿದ ಪ್ರಕರಣಗಳಲ್ಲಿ, ಲಿವ್-ಇನ್ ಸಂಬಂಧಗಳಲ್ಲಿ ಹೆಣ್ಣುಮಕ್ಕಳನ್ನು ಶೋಷಣೆಗೊಳಗಾಗುತ್ತಿರುವ ಉದಾಹರಣೆಗಳು ಇವೆ. 50 ತುಂಡುಗಳಾಗಿ ಕತ್ತರಿಸಿರುವ ಘಟನೆಗಳು ನೋವುಂಟುಮಾಡುತ್ತವೆ. ನಮ್ಮ ಹೆಣ್ಣುಮಕ್ಕಳು ಏಕೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಆನಂದಿ ಬೆನ್ ಹೇಳಿದರು.

ರಾಜ್ಯಪಾಲೆಯವರು ಯುವತಿಯರಿಗೆ ತಮ್ಮ ಜೀವನದ ಬಗ್ಗೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿದರು. ಆದರೆ, ಅವರು ತೀರ್ಮಾನಿಸುತ್ತಿರುವ ಆಯ್ಕೆಗಳು ಭದ್ರವಾಗಿರುವುದಕ್ಕೆ, ಬುದ್ಧಿವಂತಿಕೆಯಿಂದ ಹಾಗೂ ಜವಾಬ್ದಾರಿಯಿಂದ ಆಲೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಯ ಕುರಿತು ತಮ್ಮ ಸಂದೇಶ ನೀಡಿರುವ ಅವರು, ಶಿಕ್ಷಣವೆಂದರೆ ಕೇವಲ ಪದವಿ ಗಳಿಸುವುದಲ್ಲ.

ಶಿಕ್ಷಣವು ಕೇವಲ ಪ್ರಮಾಣಪತ್ರಗಳನ್ನು ಗಳಿಸುವ ಸಾಧನವಲ್ಲ. ಜೀವನದಲ್ಲಿ ಬದಲಾವಣೆಯನ್ನು ತರುವ ಸಾಧನವಾಗಿದೆ ಎಂದು ಹೇಳಿದರು. ತೃತೀಯ ಲಿಂಗಿಗಳ ಶಿಕ್ಷಣವನ್ನು ಉತ್ತೇಜಿಸುವಲ್ಲಿ ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಆನಂದಿ ಬೆನ್ ಪಟೇಲ್ ಶ್ಲಾಘಿಸಿದರು. ಶೈಕ್ಷಣಿಕ ಸಹಯೋಗವನ್ನು ವಿಸ್ತರಿಸಲು ತೈವಾನ್‌ನೊಂದಿಗೆ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಘೋಷಿಸಿದರು.

ವರಿರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss