- Advertisement -
Mandya News: ಮಂಡ್ಯ: ಮಿನಿ ಬಸ್ ತಡೆದ ಕಾರಣಕ್ಕೆ ಮಹಿಳಾ ಆರ್ ಟಿ ಒ ಅಧಿಕಾರಿಯನ್ನು ಜನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕ“ಂಡ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಗೇಟ್ ಬಳಿ ಘಟನೆ ನಡೆದಿದ್ದು, ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಮಹಿಳಾ ಆರ್.ಟಿ.ಓ ಹೇಮಾವತಿ ಮಿನಿ ಬಸ್ ತಡೆದಿದ್ದಾರೆ. ಮಿನಿ ಬಸ್ ತಡೆಯುತ್ತಿದ್ದಂತೆ ಜನ ರೊಚ್ಚಿಗೆದ್ದು, ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಯಾವ ಆಧಾರದಲ್ಲಿ ಬೆಂಗಳೂರು ಮೈಸೂರು ರಾಷ್ಟ್ರಿಯ ಹೆದ್ದಾರಿಯಲ್ಲಿ ವಾಹನ ತಡೆಯುತ್ತಿದ್ದೀರಿ ಎಂದು ಸಾರ್ವಜನಿಕರು 20 ನಿಮಿಷಗಳ ಕಾಲ ಕ್ಲಾಸ್ ತೆಗೆದುಕ“ಂಡಿದ್ದು, ಜನರ ಪ್ರಶ್ನೆಗೆ ಉತ್ತರಿಸಲಾಗದೇ ಹೇಮಾವತಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
- Advertisement -

