Sandalwood News: ನಟ ರಾಜವರ್ಧನ್ ಅವರು ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ ತಮ್ಮ ಕಲಾ ಜರ್ನಿ, ನಟನಾದ ರೀತಿ, ಕಷ್ಟ ಕಾಲದಲ್ಲಿ ಸಹಾಯ ಮಾಡಿದವರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ತಮ್ಮ ತಂದೆ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಅವರ ಬಗ್ಗೆಯೂ ಮಾತನಾಡಿದ್ದಾರೆ.
ನನ್ನ ಅಪ್ಪನ ಬಗ್ಗೆ ನನಗೆ ತುಂಬಾ ಗೌರವ, ಹೆಮ್ಮೆ ಇದೆ. ಅವರು ಯಾವ ಕೆಲಸ ಮಾಡಿಲ್ಲ ಅಂತಿಲ್ಲ. ಸೆಟ್‌ನಲ್ಲಿ ಎಲ್ಲ ಕೆಲಸವನ್ನೂ ಮಾಡುತ್ತಿದ್ದರು. ಕಲಾವಿದರ ವಸ್ತ್ರ ತರುವುದು, ಅವರ ಚಪ್ಪಲಿ ತರುವುದು ಹೀಗೆ ಹಲವು ಸಣ್ಣ ಸಣ್ಣ ಕೆಲಸ ಮಾಡುತ್ತಿದ್ದವರು. ಆ ಸಮಯದಲ್ಲಿ ಸ್ವಲ್ಪ ಗೋಧಿ ಹಿಟ್ಟು ತಂದು ಅದನ್ನೇ ಕಲಿಸಿ ಕಲಿಸಿ 7 ತಿಂಗಳು ಅದರಿಂದ ಆಹಾರ ತಯಾರಿಸಿ ತಿಂದಿದ್ದಾರೆ. ಅಂಥ ಕಷ್ಟದ ದಿನಗಳನ್ನು ಡಿಂಗ್ರಿ ನಾಗರಾಜ್ ನೋಡಿದ್ದಾರೆ.
ಮತ್ತು ಇದೆಲ್ಲವನ್ನೂ ನನ್ನ ತಂದೆ ನನಗೆಂದೂ ಹೇಳಲಿಲ್ಲ. ಅವರು ತಮ್ಮ ಕಷ್ಟಗಳನ್ನು ಮುಚ್ಚಿಟ್ಟು ನಮ್ಮನ್ನು ಸಾಕಿದ್ದಾರೆ. ಬೇರೆಯವರು ಮಾಡಿದ ಸಂದರ್ಶನದಲ್ಲಿ ಮಾತನಾಡಿದಾಗ, ನಮಗೆ ಈ ವಿಷಯವೆಲ್ಲ ತಿಳಿಯಿತು ಎಂದು ರಾಜವರ್ಧನ್ ಹೇಳಿದ್ದಾರೆ.
ಅಲ್ಲದೇ ಸಿನಿಮಾಗೆ ಬಂದ ಮೇಲೆ ಯಾವ ರೀತಿ ಸಮಸ್ಯೆ ಬರಬಹುದು ಎಂದು ನಾನು ಸಿನಿ ಇಂಡಸ್ಟ್ರಿಗೆ ಬಂದ ಬಳಿಕ ನನಗೆ ತಿಳಿಯಿತು. ಅಲ್ಲಿಯವರೆಗೂ ನಮಗೆ ಆ ಕಷ್ಟದ ಬಗ್ಗೆ ತಿಳಿದೇ ಇರಲಿಲ್ಲ ಅಂತಾರೆ ರಾಜವರ್ಧನ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.