Tuesday, October 14, 2025

Latest Posts

Tumakuru News: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಯುವಕನ ಬಂಧನ

- Advertisement -

Tumakuru News: ತುಮಕೂರು: ತುಮಕೂರಿನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುತಿಕೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ, ಯುವಕನನ್ನು ಬಂಧಿಸಲಾಗಿದೆ.

ತುಮಕೂರು ಬೆಂಗಳೂರು ನಾನ್ ಸ್ಟಾಪ್ ಬಸ್ ನಲ್ಲಿ ಈ ಘಟನೆ ನಡೆದಿದ್ದು, ಸಹ ಪ್ರಯಾಣಿಕ ಯುವತಿ ಮೇಲೆ ಯುವಕ ಹಸ್ತಮೈಥುನ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ಕೆಎ 06- ಎಫ್ 1235 ನೊಂದಣಿಯ ಬಸ್ ನಲ್ಲಿ ಈ ಘಟನೆ ನಡೆದಿದ್ದು.

ಜೀವನ್ ರಾಜ್(26) ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ತುಮಕೂರಿನ ಕೃಷ್ಣ ನಗರ ನಿವಾಸಿಯಾಗಿದ್ದಾನೆ. ಈತನ ಕೃತ್ಯಕ್ಕೆ ಸಿಟ್ಟಾದ ಯುವತಿ,ನವಯುಗ ಟೋಲ್ ಬಳಿ ಗಲಾಟೆ ಮಾಡಿದ್ದಾರೆ. ಬಳಿಕ ಎಲ್ಲರಿಗೂ ವಿಷಯ ತಿಳಿದು, ಬಸ್‌ ಕಂಡಕ್ಟರ್, ಡ್ರೈವರ್ ವಿಚಾರಿಸಿದ್ದು, ಯುವತಿ ನಡೆದಿದ್ದನ್ನು ವಿವರಿಸಿದ್ದಾರೆ ಈತನ ಕೃತ್ಯಕ್ಕೆ ಜನ ಸ್ಥಳದಲ್ಲೇ ಗೂಸಾ ನೀಡಿದ್ದಾರೆ.

ಬಳಿಕ ಯುವಕನನ್ನು ಪೋಲೀಸರಿಗೆ ಒಪ್ಪಿಸಲಾಾಗಿದೆ. ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss