Bollywood: ಭಾರತದ ಪ್ರಸಿದ್ಧ ರಿಯಾಲಿಟಿ ಶೋ ಅಂದ್ರೆ ಅದು ಕೌನ್ ಬನೇಗಾ ಕರೋಡ್‌ಪತಿ. ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೇ ನಡೆಸಿಕ“ಂಡು ಬರುತ್ತಿದ್ದಾರೆ. ಜನ ಅವರನ್ನು ಬಿಟ್ಟು ಬೇರೆಯವರನ್ನು ಆ ಕಾರ್ಯಕ್ರಮಕ್ಕೆ ಊಹಿಸಿಕ“ಳ್ಳಲು ಕೂಡ ಇಷ್ಟಪಡುವುದಿಲ್ಲ.
ಅಲ್ಲದೇ ನಮಗೂ 1 ದಿನ ಆ ಹಾಟ್ ಸೀಟ್‌ನಲ್ಲಿ ಕೂರುವ ಅವಕಾಶ ಸಿಗಬಾರದಾ ಅಂತಾ ಪರಿತಪಿಸುವವರು ಹಲವರಿದ್ದಾರೆ. ಕೆಲವರು ಕೋಟಿ ಗೆಲ್ಲುವ ಅವಕಾಶ ಸಿಗಲಿ ಎಂದು ಕಾದರೆ, ಇನ್ನು ಕೆಲವರು ಜಸ್ಟ್ ಅಮಿತಾಬ್ ಬಚ್ಚನ್ ಎದುರು ಕೂರುವ ಅದೃಷ್ಟ ಸಿಕ್ಕರೂ ಸಾಕು ಅನ್ನುವವರಿದ್ದಾರೆ.
ಆದರೆ ಇತ್ತೀಚಿನ 1 ಎಪಿಸೋಡ್‌ನಲ್ಲಿ ಇಂಥ ಸುಂದರ ಅವಕಾಶ ಪಡೆದ ಓರ್ವ ಬಾಲಕ ಮಾತ್ರ, ಜನರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಹೇಟ್ ಮಾಡುವ ಮಗು ಅಂದ್ರೂ ತಪ್ಪಾಗಲ್ಲ. ಅಷ್ಟು ಈ ಹುಡುಗ ಟ್ರೋಲ್ ಆಗುತ್ತಿದ್ದಾನೆ.
ಹಾಗಾದ್ರೆ ಆಗಿದ್ದೇನು ಅಂತೀರಾ..? ಅದನ್ನೂ ಹೇಳ್ತೀವಿ ಕೇಳಿ. ಈ ಬಾಲಕನ ಹೆಸರು ಇಶೀತ್ ಭಟ್. ಈತ ಕೆಬಿಸಿ ಜೂನಿಯರ್ ಕಾರ್ಯಕ್ರಮಕ್ಕೆ ಬಂದು, ಹಾಟ್ ಸೀಟ್‌ನಲ್ಲಿ ಕುಳಿತು, ಸ್ಪರ್ಧೆಗೆ ಆಯ್ಕೆಯಾಗಿದ್ದ. ಆದರೆ ಈತನ ದುರಹಂಕಾರ ಎಷ್ಟರ ಮಟ್ಟಿಗೆ ಇತ್ತು ಅಂದ್ರೆ, ಆತ ಬಂದು ಕುಳಿತಿದ್ದೇ ತಡ, ನೀವು ನನಗೀಗ ಈ ಆಟದ ನಿಯಮಗಳನ್ನೆಲ್ಲ ಹೇಳಲು ಹೋಗಬೇಡಿ. ನನಗೆಲ್ಲವೂ ತಿಳಿದಿದೆ. ಆಟ ಆರಂಭಿಸಿ ಸಾಕು ಎಂದು ಧಿಮಾಕಿನಿಂದ ಉತ್ತರಿಸಿದ್ದಾನೆ.
ಆದರೆ ಈ ಸಮಯದಲ್ಲೂ ತಾಳ್ಮೆ ಕಳೆದುಕ“ಳ್ಳದ ಅಮಿತಾಬ್ ಪ್ರಶ್ನೆ ಮುಂದುವರಿಸಿದ್ದಾರೆ. ಪ್ರಶ್ನೆ ಕೇಳಿದ ತಕ್ಷಣ ಬಾಲಕ ಉತ್ತರಿಸಿದ್ದಾನೆ. ಆಪ್ಶನ್ ಎಲ್ಲಾ ಬೇಡವೆಂದಿದ್ದಾನೆ. ಆಗ ಅಮಿತಾಬ್ ನಿನಗಲ್ಲದಿದ್ದರೂ, ನೋಡುಗರಿಗಾಗಿ ನಾನು ಆಪ್ಶನ್ ಹೇಳಲೇಬೇಕು ಎಂದಿದ್ದಾರೆ. ಹೀಗೆ ಮುಂದುವರೆದ ಆಟ ಹೆಚ್ಚು ಕಾಲ ಇರಲಿಲ್ಲ. ಬದಲಾಗಿ 5ನೇ ಪ್ರಶ್ನೆಗೆ ಓವರ್ ಕಾನ್ಫಿಡೆನ್ಸ್‌ನಲ್ಲಿ ತಪ್ಪಾಗಿ ಉತ್ತರಿಸಿ, ಬಾಲಕ ಮನೆಗೆ ನಡೆದಿದ್ದಾನೆ.
ಈ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರೆಲ್ಲ ಈತ ಸೋತಿದ್ದೇ ಸರಿಯಾಯಿತು. ಭಾರೀ ದುರಹಂಕಾರದಿಂದ ಮೆರೆಯುತ್ತಿದ್ದ. ಇದು ಅವರ ಅಪ್ಪ ಅಮ್ಮನಿಗೆ ತಕ್ಕ ಪಾಠ. ಮಕ್ಕಳ ದುರಹಂಕಾರವನ್ನು, ಭಂಡತನವನ್ನು ಮುದ್ದು ಎನ್ನುವವರಿಗೂ ಇದು ಪಾಠವೆಂದು ಹೇಳಿದ್ದಾರೆ.
Very satisfying ending!
Not saying this about the kid, but the parents. If you can't teach your kids humility, patience, and manners, they turn out to be such rude overconfident lot. Not winning a single rupee will surely pinch them for a long time.
pic.twitter.com/LB8VRbqxIC— THE SKIN DOCTOR (@theskindoctor13) October 12, 2025