Monday, October 13, 2025

Latest Posts

ಕೆಲಸ ಮಾಡಿ ಹೀರೋ ಆಗಿ – ಖರ್ಗೆಗೆ ರಾಜೂಗೌಡ ತರಾಟೆ

- Advertisement -

ಆರ್‌ಎಸ್‌ಎಸ್ ನಿಷೇಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ರಾಜೂ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. RSS ಬಗ್ಗೆ ಮಾತನಾಡಿದರೆ ಜನಪ್ರಿಯರಾಗುತ್ತಾರೆ ಎಂಬ ಭ್ರಮೆಯಲ್ಲಿ ಪ್ರಿಯಾಂಕ್ ಖರ್ಗೆ ಈ ಪತ್ರ ಬರೆದಿದ್ದಾರೆ. RSS ಅನ್ನು ಯಾರೂ ನಿಷೇಧಿಸಲು ಸಾಧ್ಯವಿಲ್ಲ, ಮುಂದೆಯೂ ಆಗದು ಎಂದು ಅವರು ಹೇಳಿದರು.

ಯಾದಗಿರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜೂ ಗೌಡ ಅವರು, RSS ಬಗ್ಗೆ ಮಾತನಾಡಿ ಜನಪ್ರಿಯತೆ ಗಳಿಸುವ ಪ್ರಯತ್ನ ಬಿಡಿ. ನಿಮ್ಮ ಇಲಾಖೆಯ ಅಡಿಯಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೆರೆ ಹಾನಿ ಎಷ್ಟು ಸಂಭವಿಸಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ. ಅದನ್ನು ಸರಿಯಾಗಿ ನಿರ್ವಹಿಸುವತ್ತ ಗಮನ ಹರಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡರು.

RSS ಯಾರಿಗೂ ತೊಂದರೆ ಮಾಡದ ಮಹಾಸಂಘಟನೆ. ಇದು ಜಾತಿ, ಪಕ್ಷಗಳ ಭೇದವಿಲ್ಲದೇ ಜನಸೇವೆಯಲ್ಲಿ ತೊಡಗಿರುವ ಸಂಸ್ಥೆ. RSS ಶತಾಬ್ದಿ ಸಂಭ್ರಮವನ್ನು ತಡೆಯಲು ಇದು ಷಡ್ಯಂತ್ರ. ಹೀರೋ ಆಗಲು ಸಿಎಂಗೆ ಪತ್ರ ಬರೆದಿದ್ದೀರಾ, ಆದರೆ ನೆರೆ ಹಾನಿ ವಿಚಾರವನ್ನು ಡೈವರ್್ಟ್ ಮಾಡುವ ಬದಲು ಕೆಲಸ ಮಾಡಿ ನಿಜವಾದ ಹೀರೋ ಆಗಿ ಎಂದು ಖರ್ಗೆಯವರ ವಿರುದ್ಧ ರಾಜೂ ಗೌಡ ಟೀಕಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss