Tumakuru News: ತಿಪಟೂರು ತಾಲ್ಲೂಕಿನ ಶ್ರೀ ಗುರುಕುಲ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇಧಿಕೆ ಟ್ರಸ್ಟ್(ರಿ)ತುಮಕೂರು-1 ಜಿಲ್ಲೆ ಇವರ ವತಿಯಿಂದ ಗಾಂಧಿ ಸ್ಮೃತಿ ಹಾಗೂ ನವಜೀವನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮೊದಲು ನಗರದ ಗಣಪತಿ ಪೆಂಡಾಲ್ ಇಂದ ಗುರುಕುಲ ಕಲ್ಯಾಣಮಂಟಪದವರೆಗೆ ಸಾವಿರಕ್ಕೂ ಮಿಕ್ಕಿದ ಜನಸಮೂಹದೊಂದಿಗೆ ಯಶಸ್ವಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರಾಜ್ಯ ರೈಲ್ವೆ ಮತ್ತು ಕೇಂದ್ರ ಜಲಶಕ್ತಿ ಸಚಿವರಾದ ವಿ.ಸೋಮಣ್ಣ ಹಾಗೂ ತಿಪಟೂರು ತಾಲ್ಲೂಕಿನ ಜನಪ್ರಿಯ ಶಾಸಕರಾದ ಕೆ.ಷಡಕ್ಷರಿಯವರ ನೇತೃತ್ವದಲ್ಲಿ ದೀಪವನ್ನು ಪ್ರಜ್ವಲಿಸುವ ಮುಖಾಂತರ ಗಾಂಧಿ ಸ್ಮೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ವಿ.ಸೋಮಣ್ಣ ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ಶಕ್ತಿ ಹಾಗೂ ಅಲ್ಲಿಯ ಭಕ್ತಿಬಾವದ ಬಗ್ಗೆ ತಿಳಿಸುತ್ತಾ ಸಾವಿರಾರು ವರ್ಷಗಳಿಂದ ಧರ್ಮಸ್ಥಳ ಕ್ಷೇತ್ರದಲ್ಲಿ ಧಾರ್ಮಿಕತೆಯ ವಿಧಿವಿಧಾನಗಳನ್ನು ಅನುಸರಿಸುತ್ತಿದ್ದು ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕವಾದ ನಂತರ ಕ್ಷೇತ್ರವು ಪ್ರಪಂಚದುದ್ದಗಲಕ್ಕೂ ಧಾರ್ಮಿಕತೆಯನ್ನು ಸಾರುವುದರೊಟ್ಟಿಗೆ ಪೂಜ್ಯರ ದೂರದೃಷ್ಠಿಯ ಫಲದಿಂದ ರಾಜ್ಯದ ಬಡಜನತೆಯ ಏಳಿಗಗೆಗೆ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯವೆಂದು ತಿಳಿಸಿದರು.
ಶಾಸಕರಾದ ಕೆ.ಷಡಕ್ಷರಿಯವರು ಮಾತನಾಡಿ ತಾಲ್ಲೂಕಿನಲ್ಲಿ ಸರಿಸುಮಾರು 14 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಪಾದಾರ್ಪಣೆಯ ಮೊದಲಿಗೆ ನಾನು ದೀಪವನ್ನು ಪ್ರಜ್ವಲಿಸಿ ಶುಭಹಾರೈಸಿದ್ದು ಇಂದು ತಾಲ್ಲೂಕಿನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ತರ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಆರ್ ಗುರುಪ್ರಸಾದ್, ಜಿಲ್ಲಾ ಜನಜಾಗೃತಿ ವೇಧಿಕೆಯ ಅಧ್ಯಕ್ಷರಾದ ಅಮರನಾಥಶೆಟ್ಟಿ, ಯೋಜನಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.