Monday, October 13, 2025

Latest Posts

Tumakuru: ಕಸ ವಿಲೇವಾರಿ ಆಗದ ಹಿನ್ನೆಲೆ, DC, AC, ತಹಶೀಲ್ದಾರ್‌ಗೆ ಕಸ ಪ್ಯಾಕ್ ಮಾಡಿ ಗಿಫ್ಟ್ ನೀಡಲು ನಿರ್ಧಾರ

- Advertisement -

Tumakuru News: ತುಮಕೂರು: ತುಮಕೂರಿನಲ್ಲಿ ಕಸ ವಿಲೇವಾರಿ ಸರಿಯಾದ ಸಮಯಕ್ಕೆ ಆಗದ ಕಾರಣ, ಅಲ್ಲಿನ ಜನ ವಿನೂತನವಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಅದು ಹೇಗೆ ಇವರ ಪ್ರತಿಭಟನೆ ಡಿಫ್ರೆಂಟ್ ಆಗಿದೆ ಅಂದ್ರೆ, ಇವರು ಈ ಬಾರಿ ದೀಪಾವಳಿ ಗಿಫ್ಟ್ ಅಂತಾ ಡಿಸಿ, ಎಸಿ, ತಹಶೀಲ್ದಾರ್ ಅವರಿಗೆ ಕಸವನ್ನು ಪ್ಯಾಕ್ ಮಾಡಿ ಕೋರಿಯರ್ ಮಾಡಲಿದ್ದಾರೆ.

ಇಂದು ತುಮಕೂರು ಪಟ್ಟಣ ಪಂಚಾಯ್ತಿ ಮುಂದೆ ಈ ಬಗ್ಗೆ ಪ್ರತಿಭಟನೆ ನಡೆದಿದ್ದು, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಕಳೆದ 15 ದಿನಗಳಿಂದ ಕಸ ಅಲ್ಲೇ ಇದ್ದು ಗಬ್ಬು ನಾರುತ್ತಿದೆ.

ಕಸ ವಿಲೇವಾರಿ ಮಾಡಲು ಜಾಗವಿಲ್ಲವೆಂದು ಅಲ್ಲೇ ಇರಿಸಲಾಗಿದೆ ಎಂದು ಕಾರಣವೂ ಹೇಳಿದ್ದಾರೆ. ಹಾಗಾಗಿ ಸ್ಥಳೀಯರು ಈ ಬಗ್ಗೆ ಪ್ರತಿಭಟನೆಗೆ ಇಳಿದಿದ್ದು, ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ, KRS ಪಕ್ಷ ಮುಖಂಡರು ಸಾಥ್ ನೀಡಿದ್ದಾರೆ.

ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ 7 ವರ್ಷದಿಂದ ಕಸ ವಿಲೇವಾರಿ ಘಟಕಕ್ಕೆ ಮುಕ್ತಿ ಕೊಡದ ಹಿನ್ನೆಲೆ, ಡಿಸಿ ಶುಭ ಕಲ್ಯಾಣ, ತಹಶೀಲ್ದಾರ್ ಪುರಂದರ್, ಉಪ ವಿಭಾಗಾಧಿಕಾರಿ ಸಪ್ತ ಶ್ರೀ ಗೆ ದೀಪಾವಳಿ ಉಡುಗೊರೆಯಾಗಿ ಕಸ ಪಾರ್ಸಲ್ ಮಾಡಲು ನಿರ್ಧರಿಸಲಾಗಿದೆ.

- Advertisement -

Latest Posts

Don't Miss