Political News: ಆರ್‌ಎಸ್‌ಎಸ್ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದು, ಆರ್‌ಎಸ್‌ಎಸ್ ಧಿರಿಸು ಧರಿಸಿ, ಕಪ್ಪು ಟೋಪ್ಪಿ ಧರಿಸಿ ಕುಳಿತಿದ್ದ ಶಾಸಕ ಮುನಿರತ್ನ ಅವರನ್ನು, ಏ ಕರಿ ಟೋಪ್ಪಿ ಎಂಎಲ್‌ಎ ಬಾರಪ್ಪ ಈ ಕಡೆ ಎಂದು ಕರೆದಿದ್ದರು.
ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಕರಿ ಟೋಪ್ಪಿ ಹಾರಿರುವ ಎಂ ಎಲ್ ಎನಾ ಎ ಕರಿ ಟೋಪ್ಪಿ ಎಂಎಲ್‌ಎ ಬಾರಪ್ಪ ಬಾ ಅಂತೀರಿ. ಅದೇ ಆ ಸ್ಥಳದಲ್ಲಿ ಬಿಳಿ ಟೋಪ್ಪಿ ಹಾಕಿರುವ ಜಮೀರ್ ಅಹಮದ್ ಇದ್ದಿದ್ರೆ, ಏ ಬಿಳಿ ಟೋಪ್ಪಿ ಸಾಬಣ್ಣ ಬಾರೋ ಅಂತಾ ಕರೀತಿರಾ..? ಅಷ್ಟು ದಮ್ ಇದೆಯಾ..? ಎಂದು ಪ್ರತಾಪ್ ಡಿಸಿಎಂ ಡಿಕೆಶಿಗೆ ಪ್ರಶ್ನಿಸಿದ್ದಾರೆ.
ನಿಮ್ಮ ಬ್ರದರ್ಸ್‌ನ್ನು ನಿಮಗೆ ಕರೆಯೋಕ್ಕಾಗಲ್ಲ. ದಮ್ಮಿದ್ರೆ ಹಾಗೆ ಕರೆದು ತೋರಿಸಿ. ಬಹಳ ವೀರಾವೇಶದಿಂದ ಮಾತನಾಡುತ್ತೀರಿ. ಬಹಳ ಶಕ್ತಿವಂತರಲ್ಲ ನೀವು ಕರೀರಿ ನೋಡೋಣ. ಅದನ್ನು ಕರಿಯೋಕ್ಕೆ ನಿಮಗಾಗಲ್ಲ. ಮುನಿರತ್ನ ಅವರನ್ನು ಜನ ಗೆಲ್ಲಿಸಿದ್ದಾರೆ. ಅದಕ್ಕೆ ಗೌರವ ನೀಡಿ. ನಿಮಗೆ ಕುಸುಮಾ ಅವರಿಗೆ ಅಧಿಕಾರ ನೀಡಬೇಕು ಅಂದ್ರೆ ಎಂಎಲ್‌ಸಿ ಮಾಡಿ. ರಾಜ್ಯ ಸಭೆಗೆ ಕಳುಹಿಸಿ. ಅದು ಬಿಟ್ಟು ಅಲ್ಲಿರುವ ರಾಜ ರಾಜೇಶ್ವರಿ ನಗರದ ಚುನಾಯಿತ ಪ್ರತಿನಿಧಿಯನ್ನು ನೀವು ಅವಮಾನ ಮಾಡಿದರೆ, ಅಲ್ಲಿನ ಮತದಾರನನ್ನು ಅವಮಾನಿಸಿದಂತೆ. ಯಾಕೆ ಹಾಗೆ ಮಾಡುತ್ತಿದ್ದೀರಿ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.