Wednesday, October 15, 2025

Latest Posts

ರಾಜವರ್ಧನ್ ಗೆ ಭಯ ಇಲ್ವಾ? ಒಂದು ಕಟ್ಟು ದುಡ್ಡು ಕೊಟ್ರು ದರ್ಶನ್ ಸರ್!: Raja Vardan Podcast

- Advertisement -

Sandalwood News: ನಟ ರಾಜವರ್ಧನ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಾವು ಚಿತ್ರರಂಗಕ್ಕೆ ಬರುವಾಗ ಯಾವ ಯಾವ ಸಮಸ್ಯೆ ಎದುರಿಸಿದ್ದರು.? ಈ ವೇಳೆ ಅವರಿಗೆ ಯಾರ್ಯಾರು ಸಾಥ್ ನೀಡಿದರು..? ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಸಿನಿ ಜರ್ನಿಯಲ್ಲಿ ಸೋಲಬಹುದು ಅನ್ನೋ ಭಯ ಇಲ್ಲವಾ ಅಂತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜವರ್ಧನ್, ಭಯಪಡಲು ನಾನು ಇಲ್ಲಿ ಏನೂ ತಂದಿಲ್ಲ. ಕಳೆದುಕ“ಳ್ಳಲು ಏನೂ ಇಲ್ಲ. ಕಳೆದುಕ“ಂಡರೂ ಇಲ್ಲೇ ಇರಬೇಕು. ಹೀಗೆ ಜೀವನ ಮಾಡಬೇಕು. ನಾನು ಏನಾದರೂ ಗಳಿಸಿದ್ದರೆ, ಅದು ಸಿನಿ ರಂಗದಿಂದ ಮಾತ್ರ ಎಂದು ರಾಜವರ್ಧನ್ ಹೇಳಿದ್ದಾರೆ.

ಇನ್ನು ರಾಜವರ್ಧನ್ ಅವರ ಮನೆಗೆ ತೂಗುದೀಪ ಎಂದು ಹೆಸರನ್ನಿರಿಸಲಾಗಿದೆ. ಇದರ ಹಿಂದಿನ ರಹಸ್ಯವೇನು ಎಂದು ಕೇಳಿದಾಗ, ನನಗೆ ದರ್ಶನ್ ಅಣ್ಣ ತುಂಬ ಕ್ಲೋಸ್. ನನ್ನ ಸಿನಿ ಜರ್ನಿಯಲ್ಲಿ ತುಂಬಾ ಬೆಂಬಲ ನೀಡಿದವರು. ಯಾವುದಕ್ಕೂ ಇಲ್ಲ ಎನ್ನಲಿಲ್ಲ. ಸಿನಿಮಾ ಮುಹೂರ್ತ, ಪೋಸ್ಟರ್ ಲಾಂಚ್ ಹೀಗೆ ಯಾವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದ್ರೂ, ಯಾವುದಕ್ಕೂ ಇಲ್ಲ ಎನ್ನದೇ, ಎಲ್ಲ ಕೆಲಸಕ್ಕೂ ಅವರು ನನಗೆ ಬೆಂಬಲಿಸಿದ್ದರು.

ಅಲ್ಲದೇ 1 ಸಲ ನಾನು ಮನೆ ಬಿಟ್ಟು ಆಚೆ ಬರುವಂಥ ಪರಿಸ್ಥಿತಿ ಬಂದಿತ್ತು. ಆ ದಿನ ನಾನು ದರ್ಶನ್ ಅಣ್ಣನ ಮನೆಗೆ ಹೋಗಿದ್ದೆ. ರಾತ್ರಿ ವೇಳೆ ಅವರು ನನ್ನನ್ನು ಮಾತನಾಡಿಸಿ, ಮನೆ ಬಿಟ್ಟು ಬರಲು ಕಾರಣ ಕೇಳಿ, ಸಂತೈಸಿದರು. ಅಲ್ಲದೇ ನಾನು ಕೇಳದೇ, ತಾವಾಗಿಯೇ ಹಣ ನೀಡಿ, ನೀನು ಆರ್‌ಆರ್‌ ನಗರದಲ್ಲಿ ಮನೆ ಮಾಡು ಎಂದು ಅಡ್ವಾನ್ಸ್ ಹಣವನ್ನು ನೀಡಿದರು. ಆಗಲೇ ನಾನು ಆರ್‌ಆರ್‌ ನಗರಕ್ಕೆ ಬರುವ ಯೋಚನೆ ಮಾಡಿದ್ದು ಎಂದು ದರ್ಶನ್ ಮಾಡಿದ ಸಹಾಯವನ್ನು ರಾಜ್‌ವರ್ಧನ್ ನೆನೆದಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss