Monday, October 27, 2025

Latest Posts

ಅಸಲಿ ನೋಟಿಗೆ ಕೋಟಾ ನೋಟು ಆಫರ್‌ : ಖತರ್ನಾಕ್‌ ಗ್ಯಾಂಗ್‌ ಅರೆಸ್ಟ್‌ !

- Advertisement -

ಒರಿಜಿನಲ್ ನೋಟುಗಳಿಗೆ ಖೋಟಾ ನೋಟು ಆಫರ್ ನೀಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್‌ನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ಜಯನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರನ್ನು ರೆಡ್‌ ಹ್ಯಾಂಡ್ ಆಗಿ ಬಂಧಿಸಲಾಗಿದೆ.

10 ಲಕ್ಷ ರೂ. ಅಸಲಿ ನೋಟುಗಳಿಗೆ 30 ಲಕ್ಷ ರೂ. ಖೋಟಾ ನೋಟು ನೀಡುವುದಾಗಿ ಆಫರ್ ಮಾಡಿದ್ದ ಈ ಗ್ಯಾಂಗ್‌, ವಂಚನೆ ಮಾಡಲು ಯೋಜನೆ ರೂಪಿಸಿತ್ತು. ಈ ವೇಳೆ ಪೊಲೀಸರ ಬಲೆ ಬೀಳುತ್ತಿದ್ದಂತೆಯೇ ಮೂವರು ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ.

ಬಂಧಿತರಿಂದ ನಗದು ಹಾಗೂ ವಂಚನೆಗೆ ಬಳಸಿದ್ದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ಯಾಂಗ್‌ನ ಇತರ ಸದಸ್ಯರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಆರಂಭಿಸಿದ್ದು, ಈ ಪ್ರಕರಣವು ನಗರದ ಹಣಕಾಸು ವಲಯದಲ್ಲಿ ಆತಂಕ ಮೂಡಿಸಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss