Tech News: ಹಬ್ಬದ ಸಂದರ್ಭದಲ್ಲಿ ಮನೆ ಕ್ಲೀನ್ ಆಗಿರಬೇಕು. ದೇವರ ಕೋಣೆ ಚೆಂದಗಾಣಿಸಬೇಕು. ಹಬ್ಬಕ್ಕೆ ಮನೆಗೆ ಬಂದವರು, ಮನೆಯನ್ನು, ಮನೆಯಲ್ಲಿರುವ ವಸ್ತುಗಳನ್ನು ನೋಡಿ ವಾವ್ ಅನ್ನಬೇಕು ಅಂತಾ ಹಲವರಿಗೆ ಆಸೆ ಇರುತ್ತೆ. ಅಂಥವರಿಗಾಗಿ ನಾವಿಂದು ಹಬ್ಬದ ಸಂದರ್ಭದಲ್ಲಿ ದೇವರ ಕೋಣೆಯಲ್ಲಿ ಇಡಬಹುದಾದ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಬಗ್ಗೆ ಹೇಳಲಿದ್ದೇವೆ.
ಮಂತ್ರಾ ಚಾಂಟಿಂಗ್ ಡಿವೈಸ್: ಈ ಡಿವೈಸ್ ಪ್ಲಗ್ ಮಾಡುವ ರೀತಿ ಇರುತ್ತದೆ. ಇದನ್ನು ನೀವು ಪ್ಲಗ್ ಮಾಡಿ, ಮಂತ್ರ ಹಾಕಬಹುದು. ಇದರಲ್ಲಿ 35ಕ್ಕೂ ಹೆಚ್ಚು ಪ್ರಿರೆಕಾರ್ಡಿಂಗ್ ಮಂತ್ರ ಇರುತ್ತದೆ. ನಿಮಗೆ ಬೇಕಾದ ಮಂತ್ರವನ್ನು ಚೇಂಜ್ ಮಾಡಬಹುದು ಮತ್ತು ಸೌಂಡ್ ಕಡಿಮೆ ಹೆಚ್ಚು ಮಾಡಬಹುದು.
ತ್ರಿಡಿ ರಾಮಮಂದಿರ್: ಈ ತ್ರಿಡಿ ರಾಮಮಂಂದಿರ ಪದೇ ಪದೇ ಬೇರೆ ಬೇರೆ ಬಣ್ಣಕ್ಕೆ ತಿರುಗುತ್ತದೆ. ನೋಡುವವರಿಗೆ ಚೆಂದಗಾಣಿಸುತ್ತದೆ.
ಲಕ್ಷ್ಮೀ ದೇವಿ ಗ್ಲೋವಿಂಗ್ ಫೋಟೋ ಗ್ಲಾಸ್: ಈ ಚೆಂದದ ಫೋಟೋ ಗ್ಲಾಸ್‌ನ್ನು ಪ್ಲಗ್ ಮಾಡಿ, ಆನ್ ಮಾಡಿದ್ರೆ, ಇದರಲ್ಲಿ ಲೈಟ್ ಆನ್ ಆಗುತ್ತದೆ. ಆಗ ಇದರಲ್ಲಿ ಮುದ್ದಾಗಿರುವ ಲಕ್ಷ್ಮೀ ಕಾಣುತ್ತಾಳೆ.
ವಾಟರಿ ಸ್ಮೋಕ್ ಶಿವಲಿಂಗ : ಇದರಲ್ಲಿ ಧೂಪ ಹಾಕಿದ್ರೆ ಶಿವಲಿಂಗಕ್ಕೆ ನೀರು ಬಿದ್ದ ಹಾಗೆ ಧೂಪದ ಸ್ಮೋಕ್ ಬರುತ್ತದೆ. ಇದರ ಜತೆಗೆ ನೀವು ವಿದ್ಯುತ್ ಬಳಸಿದ್ರೆ ಬಣ್ಣ ಕೂಡ ಬದಲಾಗುತ್ತದೆ.
ಎಲೆಕ್ಟ್ರಿಕ್ ಬೆಲ್: ಮನೆಯಲ್ಲಿ ಆರತಿ ಮಾಡುವ ವೇಳೆ ಈ ಬೆಲ್ ಬಟನ್ ಪ್ರೆಸ್ ಮಾಡಿದ್ರೆ ಸಾಕು. ಗಂಟೆ ಬಾರಿಸುತ್ತಲೇ ಇರುತ್ತದೆ. ನೀವು ಆರಾಮವಾಗಿ ಆರತಿ ಮಾಡಿ, ಭಜನೆ ಹಾಡುತ್ತ, ಭಕ್ತಿಯಿಂದ ಪೂಜೆ ಮಾಡಬಹುದು.

