- Advertisement -
Political News: ಕಲಬುರಗಿಯಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕಾಗಿ ಹಾಕಿದ್ದ ಬ್ಯಾನರ್, ಧ್ವಜ ತೆರವು ಮಾಡಿದ್ದಕ್ಕೆ, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಸುನೀಲ್ ಕುಮಾರ್ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಲಬುರ್ಗಿ ಕಂಸ”ನಿಗೆ ಈಗ ಕನಸು ಮನಸಿನಲ್ಲೂ ಆರ್ ಎಸ್ ಎಸ್. ಸಂಘದ ಶತಮಾನೋತ್ಸವ ಸಂಭ್ರಮ ಈ ಮಹಾಶಯನಿಗೆ ಸಂಕಟವನ್ನುಂಟು ಮಾಡಿದೆ. ಕಳೆದೊಂದು ವಾರದಿಂದ ನಿದ್ದೆ ಬಿಟ್ಟು ಆರ್ ಎಸ್ ಎಸ್ ವಿರುದ್ಧ ಏನೆಲ್ಲ ಮಸಲತ್ತು ಮಾಡಲು ಸಾಧ್ಯ ಎಂದು ಯೋಚಿಸುತ್ತಿರುವ ಈ ಆಧುನಿಕ ಔರಂಗಜೇಬ್ ಈಗ ಭಗವಾಧ್ವಜದ ಮೇಲೆ ಕಣ್ಣಿಟ್ಟಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಭಗವಾಧ್ವಜಕ್ಕೆ ಕೈ ಹಾಕಿದ ಔರಂಗಜೇಬ್ ನನ್ನೇ ಮಣಿಸಿದ್ದೇವೆ. ಪ್ರತಿಯೊಬ್ಬ ಜಾಗೃತ ಹಿಂದುವೂ ಶಿವಾಜಿಯಾಗಬಲ್ಲ ನೆನಪಿಡಿ ಎಂದು ಸುನೀಲ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಬರೆದಿದ್ದಾರೆ.
- Advertisement -