Putturu News: ಟ್ರಾಫಿಕ್ ಪೋಲೀಸರು, ಚಲಿಸುತ್ತಿದ್ದ ಆಟೋಗೆ ಅಡ್ಡ ಬಂದು, ಚಾಲಕನನ್ನು ಸೂ ಮಗ, ಬೋ ಮಗ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವೀಡಿಯೋ ವೈರಲ್ ಆಗಿದೆ.
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಚಾಲಕನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ. ಪೋಲೀಸರು ಈ ರೀತಿ ದಾದಾಗಿರಿ ಮಾಡುವ ದೃಶ್ಯವನ್ನು ಚಾಲಕ ರೆಕಾರ್ಡ್ ಮಾಡಿದ್ದಕ್ಕೆ, ಸೂ ಮಗನೇ ವೀಡಿಯೋ ಮಾಡ್ತೀಯಾ ನೀನು ಎಂದು ಪೋಲೀಸರು ದರ್ಪ ತೋರಿದ್ದಾರೆ. ಕೈಯಲ್ಲಿರುವ Mobile ಕಸಿಯುವ ಪ್ರಯತ್ನ ಮಾಡಿದ್ದಾರೆ.
ಆಗಿದ್ದೇನು..?
ಪುತ್ತೂರಿನಲ್ಲಿ ಬಶೀರ್ ಎಂಬ ಚಾಲಕ ಸಮವಸ್ತ್ರ ಧರಿಸದೇ, ಆಟೋ ಓಡಿಸುತ್ತಿದ್ದ. ಈ ವೇಳೆ ಅವನನ್ನು ಪೋಲೀಸರು ತಡೆದಿದ್ದಾರೆ. ಆದರೆ ಆಟೋ ನಿಲ್ಲಿಸದೇ, ಇನ್ನೂ ವೇಗವಾಗಿ ಗಾಡಿ ಓಡಿಸಿ, ನಿಯಮ ಉಲ್ಲಂಘಿಸಿದ್ದಾನೆ.
ಈ ಕಾರಣಕ್ಕೋ ಕೋಪಗ“ಂಡ ಪೋಲೀಸರು, ಆತನ ಗಾಡಿಗೆ ಅಡ್ಡ ಹಾಕಿ, ಗಾಡಿ ನಿಲ್ಲಿಸಲು ಹೇಳಿದ್ದಾರೆ. ಈ ವೇಳೆ ಪೋಲೀಸರ ನಡುವಳಿಕೆಯನ್ನು ಚಾಲಕ ತನ್ನ ಫೋನ್‌ನಲ್ಲಿ ಸೆರೆಹಿಡಿದಿದ್ದಾನೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಚಾಲಕರಿಗೆ ಹೊಡೆಯುವ ಅಧಿಕಾರ ಕೊಟ್ಟವರು ಯಾರು ಇವರು ಕಾನೂನು ಪಾಲಕರೆ! ಇವರ ವಿರುದ್ಧ ಕಾನೂನು ಕ್ರಮ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ವೀಡಿಯೋ ವೈರಲ್ ಆಗುತ್ತಿದ್ದಂತೆ, ಪುತ್ತೂರು ಸಂಚಾರಿ ಪೋಲೀಸ್ ಇಲಾಖೆಯು ಎಎಸ್‌ಐ ಚಿದಾನಂದ ರೈ ಮತ್ತು ಸಿಪಿಸಿ ಶೈಲ ಎಂ.ಕೆ ಎಂಬುವವರನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ.
ಪುತ್ತೂರು ಟ್ರಾಫಿಕ್ ಪೊಲೀಸರ ರೌಡಿಸಂ ವಾಹನ ಚಾಲಕರು ಹೆದರುವ ಪರಿಸ್ಥಿತಿ ಸೊ…. ಮಗ ರo… ಮಗ ಬೈದು ಚಾಲಕರಿಗೆ ಹೊಡೆಯುವ ಅಧಿಕಾರ ಕೊಟ್ಟವರು ಯಾರು ಇವರು ಕಾನೂನು ಪಾಲಕರೆ! ಇವರ ವಿರುದ್ಧ ಕಾನೂನು ಕ್ರಮ ಆಗಲೇಬೇಕು @spdkpolice pic.twitter.com/1HJRDMJwdh
— Khadar Madavu (@KhadarMadavu) October 17, 2025