Wednesday, October 22, 2025

Latest Posts

ಮಂತ್ರಾಲಯದಲ್ಲಿ DCM ಡಿ.ಕೆ ಶಿವಕುಮಾರ್‌ ವಿಶೇಷ ಪ್ರಾರ್ಥನೆ

- Advertisement -

ಹಿಡಿದ ಹಠ ಬಿಡದ ಟ್ರಬಲ್ ಶೂಟರ್ DCM ಡಿ.ಕೆ ಶಿವಕುಮಾರ್‌. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಡಿಕೆಶಿ ಟೆಂಪಲ್‌ ರನ್‌ ಮುಂದುವರೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹಾಸನಾಂಬ ದೇವಿ ದರ್ಶನ ಮಾಡಿದ್ರು.

ಈಗ ಮಂತ್ರಾಲಯಕ್ಕೆ ತೆರಳಿದ್ದು, ರಾಯರ ದರ್ಶನ ಪಡೆದಿದ್ದಾರೆ. ಪತ್ನಿ ಉಷಾ ಜೊತೆ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದು, ವರ್ಷಕ್ಕೊಮ್ಮೆ ನಡೆಯುವ ಮೂಲ ರಾಮದೇವರ ಮಹಾ ಅಭಿಷೇಕದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ನಾಡಿನ ಸಮಸ್ತ ಜನತೆಯ ಒಳಿತಿಗಾಗಿ, ಎಲ್ಲರ ಸುಖ-ಶಾಂತಿಗಾಗಿ ರಾಯರಲ್ಲಿ ಪ್ರಾರ್ಥಿಸಿದ್ದೇನೆಂದು ಟ್ವೀಟ್‌ ಮಾಡಿದ್ದಾರೆ.

 

ಇದೇ ವೇಳೆ ಮಂಚಾಲಮ್ಮ ದೇವಿಯ ದರ್ಶನವನ್ನೂ ಮಾಡಿದ್ದು, ಬಳಿಕ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಶ್ರೀಗಳ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಡಿಕೆಶಿ, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ವೇಳೆ ನಾನು ಶ್ರೀಮಠಕ್ಕೆ ಆಗಮಿಸಿದ್ದೆ. ಆಗ ಮಾಡಿದ್ದ ಸಂಕಲ್ಪದಿಂದಾಗಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಶ್ರೀಮಠದಿಂದ ಮಂತ್ರಾಲಯಕ್ಕೆ ಬರಲು ಆಹ್ವಾನವಿತ್ತು. ರಾಯರ ಅನುಗ್ರಹಕ್ಕಾಗಿ ಬಹಳ ದಿನಗಳಿಂದ ಬರಬೇಕು ಅಂದುಕೊಂಡಿದ್ದೆ. ಗುರುಗಳ ಅನುಗ್ರಹ ಅವಶ್ಯಕ. ಇಂದು ವಿಶೇಷ ದಿನವಾಗಿದ್ದು, ಶ್ರೀಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲೂ ಭಾಗಿಯಾಗಿರುವುದಾಗಿ ಹೇಳಿದ್ರು.

ಹಾಸನಾಂಬೆ ದೇವಿ ಎದುರು ಕುಳಿತಿದ್ದ ಡಿಕೆಶಿ, ಖಡ್ಗಮಾಲಾ ಮತ್ತು ನಾರಾಯಣ ಸ್ತೋತ್ರ ಪಠಿಸಿದ್ರು. ಕೈಮುಗಿದು ಕುಳಿತಿದ್ದ ಡಿಕೆಶಿಗೆ, ಹಾಸನಾಂಬೆ 2 ಬಾರಿ ಹೂವಿನ ಪ್ರಸಾದ್‌ ಕೊಟ್ಟಿದ್ರು. ಇದು ಡಿಕೆಶಿ ಕನಸಿಗೆ ಪುಷ್ಠಿ ಕೊಟ್ಟಿತ್ತು. ಈಗ ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.

ಮತ್ತೊಂದು ಇಂಟ್ರೆಸ್ಟಿಂಗ್‌ ವಿಷ್ಯ ಅಂದ್ರೆ, ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲೂ ಸ್ಥಳೀಯ ದೇಗುಲಗಳಿಗೂ ಭೇಟಿ ಕೊಡ್ತಿದ್ದು, ದೇವರ ದರ್ಶನ ಪಡೀತಿದ್ದಾರೆ. ನವೆಂಬರ್‌ ಕ್ರಾಂತಿ ಚರ್ಚೆ ಬೆನ್ನಲ್ಲೇ ಡಿಕೆಶಿ ಟೆಂಪಲ್‌ ರನ್‌ ಭಾರೀ ಕುತೂಹಲ ಮೂಡಿಸಿದೆ.

- Advertisement -

Latest Posts

Don't Miss