Wednesday, October 22, 2025

Latest Posts

ಇವರೇ ರಾಜ್ಯದ ನೆಕ್ಸ್ಟ್ ‘ಸಿಎಂ’ ಮೌನ ಮುರಿದ ಕಾಂಗ್ರೆಸ್ ನಾಯಕ!

- Advertisement -

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಬದಲಾವಣೆ ಕುರಿತ ಚರ್ಚೆಗಳು ವೇಗ ಪಡೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಹೆಸರುಗಳು ಕೇಳಿಬರುತ್ತಿವೆ. ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಕುರಿತು ಸಾಕಷ್ಟು ಊಹಾಪೋಹಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಯತೀಂದ್ರ ಈ ಹೇಳಿಕೆಯ ಮೂಲಕ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಸುಳಿವು ನೀಡಿದ್ದಾರೆ. ಪ್ರಗತಿಪರ ಸಿದ್ಧಾಂತ ಇಟ್ಟುಕೊಂಡಿರುವ ನಾಯಕರು ನಮಗೆ ಬೇಕು. ಅವರು ಮಾರ್ಗದರ್ಶನ ನೀಡಿ ನೇತೃತ್ವ ವಹಿಸಬೇಕು. ಸತೀಶ್ ಜಾರಕಿಹೊಳಿ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಯತೀಂದ್ರ ತಿಳಿಸಿದ್ದಾರೆ.

ಹಕ್ಕುಬದ್ಧತೆ ಇರುವ ನಾಯಕನನ್ನು ಹುಡುಕುವುದು ಸುಲಭವಲ್ಲ. ಆದರೆ, ಸತೀಶ್ ಜಾರಕಿಹೊಳಿ ಅವರು ಆ ಹೊಣೆಗಾರಿಕೆಯನ್ನು ನಿಭಾಯಿಸಬಲ್ಲವರು. ಅವರು ಕಾಂಗ್ರೆಸ್ ಸಿದ್ಧಾಂತದ ಪರಿಪಾಲನೆ ಮಾಡುವಂತಹ ಮಾದರಿ ನಾಯಕರು ಎಂದು ಯತೀಂದ್ರ ಅವರು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರೆ ಎಂಬ ಮಾತುಗಳು ಕೇಳಿ ಬರ್ತಾಯಿದೆ. ಕೇವಲ ಯತಿಂದ್ರ ಸಿದ್ದರಾಮಯ್ಯ ಮಾತ್ರವಲ್ಲ ಹಲವು ಕಾಂಗ್ರೆಸ್ ನಾಯಕರು ಸತೀಶ್ ಜಾರಕಿಹೊಳಿನೇ ಮುಂದಿನ ಸಿಎಂ ಎನ್ನುವ ಕೂಗುಗಳು ಕೇಳಿ ಬರ್ತಾಯಿದೆ.

ಹೀಗಿರೋವಾಗ ಮೊನ್ನೆ ಆರ್‌ಬಿ ತಿಮ್ಮಾಪೂರ ಕೂಡ ಸ್ಫೋಟಕ ಭವಿಷ್ಯ ನುಡಿದಿದ್ದರು. ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದಿದ್ರು. ಹಲವು ನಾಯಕರು ಕೂಡ ಸತೀಶ್ ಜಾರಕಿಹೊಳಿ ಅವರ ಹೆಸರು ಮುನ್ನಲೆಗೆ ತಂದಿದ್ರು. ಬಿಜೆಪಿ ನಾಯಕ ರಾಜು ಗೌಡ ಸಲಹೆ ನೀಡಿದ್ದರು. ಈಗ ಯತಿಂದ್ರ ಸಿದ್ದರಾಮಯ್ಯ ಕೂಡ ಹೀಗೆ ಹೇಳ್ತಿದ್ದಾರೆ.

ಆರ್‌ಬಿ ತಿಮ್ಮಾಪೂರ, ವೇದಿಕೆಯಲ್ಲಿಭಾಷಣ ಮಾಡುತ್ತಾ ನನ್ನ ನಾಯಕ, ಮುಂದಿನ ಎಲ್ಲರ ನಿರೀಕ್ಷೆಯಲ್ಲಿರುವ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದಿದ್ದಾರೆ. ಸತೀಶ್ ಜಾರಕಿಹೊಳಿ ಯಾರದೋ ಕೃಪೆಯಿಂದ ಮುಖ್ಯಮಂತ್ರಿ ಆಗುವುದಲ್ಲ, ಅವರ ಸ್ವಂತ ಶಕ್ತಿಯಿಂದ ಮುಖ್ಯಮಂತ್ರಿ ಆಗುತ್ತಾರೆ. ಅಭಿವೃದ್ಧಿ ಕಾರ್ಯಗಳ ಮೂಲಕ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗುತ್ತಾರೆ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss