ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ ಚರ್ಚೆಯ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್ ದೇವಸ್ಥಾನ ಭೇಟಿಗಳಲ್ಲಿ ತೊಡಗಿಕೊಂಡಿರುವಾಗ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ಸ್ಫೋಟಕ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರು ರಾಜಕೀಯ ಬದುಕಿನ ಕೊನೆ ಹಂತದಲ್ಲಿ ಇದ್ದಾರೆ ಎಂಬ ಹೇಳಿಕೆಯಿಂದ ರಾಜಕೀಯ ತಾಪಮಾನ ಏರಿದೆ.
ಯತೀಂದ್ರ ಅವರು ಬೆಳಗಾವಿ ಜಿಲ್ಲೆಯ ಕಪ್ಪಲಗುದ್ದಿಯಲ್ಲಿ ನಡೆದ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಂದಿನ ಮುಖ್ಯಮಂತ್ರಿ ಅಹಿಂದ ಸಮುದಾಯದವರಾಗಬೇಕು ಎಂದು ಹೇಳಿ, ಸತೀಶ್ ಜಾರಕಿಹೊಳಿ ಹೆಸರನ್ನು ಉಲ್ಲೇಖಿಸಿದ್ದಾರೆ. ಇದರಿಂದ ಡಿಕೆಶಿಗೆ ಕೌಂಟರ್ ಆಗಿ ಅಹಿಂದ ನಾಯಕರ ಒಗ್ಗೂಡುವ ಪ್ರಯತ್ನವೆಂದು ರಾಜಕೀಯ ವಲಯ ವಿಶ್ಲೇಷಿಸುತ್ತಿದೆ.
ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ತೀವ್ರ ರಾಜಕೀಯ ಪೈಪೋಟಿಯ ನಡುವೆ ಯತೀಂದ್ರರ ಹೇಳಿಕೆ ತಲ್ಲಣ ಉಂಟುಮಾಡಿದೆ. ಈಗ ಎಲ್ಲರ ಗಮನ ಡಿಕೆಶಿಯ ಮುಂದಿನ ಹೆಜ್ಜೆಯತ್ತ ತಿರುಗಿದ್ದು, ಸಿದ್ದರಾಮಯ್ಯ ನಂತರ ಅಹಿಂದ ನಾಯಕರಿಗೆ ಸಿಎಂ ಪಟ್ಟ ಸಿಕ್ಕಿದರೆ ಡಿಕೆಶಿಯ ತೀರ್ಮಾನ ಏನಾಗಬಹುದು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ