ಸಮಾಜದಲ್ಲಿ RSS ವಿಷಜಂತುಗಳನ್ನ ಬೆಳೆಸಬಾರದು ಅಂತ ಕುಮಾರಸ್ವಾಮಿ ಅವರು RSS ಬ್ಯಾನ್ ಬಗ್ಗೆ ಒಂದು ಆರ್ಟಿಕಲ್ ಬರೆದಿದ್ರು. RSS ಸಹವಾಸ ಬೇಡ ಅಂದಿದ್ದ HD ಕುಮಾರಸ್ವಾಮಿ ಅವ್ರು ಈಗ ಸೈಲೆಂಟ್ ಆಗಿದ್ದಾರೆ. ದೇವೇಗೌಡ್ರು ಕೂಡ RSS ಬ್ಯಾನ್ ಬಗ್ಗೆ ವಿಶ್ಲೇಷಿಸಿದ್ರು. ಆಗಿನಿಂದ ಇಲ್ಲಿಯವರೆಗೂ ಏನು ಬದಲಾವಣೆ ಆಗಿದೆ. ಕುರ್ಚಿ ಗೋಸ್ಕರ ತತ್ವ ಬದಲಾವಣೆ ಮಾಡುವ ಪಕ್ಷ JDS ಅಂತ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು.
ಈಗ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ವಿರೋಧವಾಗಿ HD ಕುಮಾರಸ್ವಾಮಿ ಪ್ರತಿಕ್ರಿಯಿಸಿ, ತಿರುಗೇಟು ಕೊಟ್ಟಿದ್ದಾರೆ. ನಾನಿದ್ದಾಗ ಏನು ಕೊಟ್ಟಿದ್ದಾರೆ ಅಂತ ಸಿದ್ದರಾಮಯ್ಯ ನವರು ಈಗ ಚರ್ಚೆ ಮಾಡ್ತಾರೆ. ನಾನು ಒಂದೇ ವರ್ಷದಲ್ಲಿ ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ಕೊಟ್ಟಿದ್ದೇನೆ. ಅವರ ಹತ್ರ ರೆಕಾರ್ಡ್ ಇಲ್ವಾ? ಅಂಕಿ ಅಂಶಗಳು ಇಲ್ವಾ? ಅಂತ ಕಾರವಾಗಿ ಪ್ರಶ್ನಿಸಿದ್ದಾರೆ.
ಅವರ ನಡವಳಿಕೆ ಬಗ್ಗೆನೂ ನಾನು ಚರ್ಚೆ ಮಾಡಿದ್ದೇನೆ. ಇವತ್ತು ಕಲಬುರಗಿಯಲ್ಲಿ ಜನರು ಬೀದಿಯಲ್ಲಿದ್ದಾರೆ. ಬೆಳೆ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ನೀವೇನು ಮಾಡಿದ್ದೀರಾ? ರಾಜಕೀಯದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಅಂತ ನಿಮ್ಮನ್ನು ನೋಡಿ ಕಲಿಯಬೇಕಾ ಅಂತ ಪ್ರಶ್ನಿಸಿದ್ದಾರೆ. ಮಾತನಾಡಬೇಕಾದ್ರೆ ಹದ್ದುಬಸ್ತಿನಲ್ಲಿ ಮಾತನಾಡಬೇಕು ಅಂತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಟಾಂಗ್ ಕುಮಾರಣ್ಣ ಕೊಟ್ಟಿದ್ದಾರೆ.
ನನ್ನ ಬಗ್ಗೆಯಾಗಲಿ ನನ್ನ ಪಕ್ಷದ ಬಗ್ಗೆ ಆಗಲಿ ಚರ್ಚೆ ಮಾಡುವ ಯೋಗ್ಯತೆ ಉಳಿಸಿಕೊಂಡಿಲ್ಲ ನೀವು. ನಾವು ಯಾವ ಅಧಿಕಾರಕ್ಕೋಸ್ಕವು ಹೋಗಲ್ಲ. ಅವರಿಗೆ ಬೇಕಾದಾಗ ಅಧಿಕಾರ ಕೇಳೋಕೆ ಕಾಂಗ್ರೆಸ್ ನವರು ನಮ್ಮ ಬಳಿ ಬರ್ತಾರೆ. ಎಷ್ಟೋ ಜನರ ರಾಜಕೀಯ ಭವಿಷ್ಯ ನಿರ್ಣಾಮ ಮಾಡಿದ್ದಾರೆ. ಎಷ್ಟು ಜನರನ್ನ ತೆಗೆದು ಹಾಕಿದ್ದಾರೆ. ಅಷ್ಟೇ ಯಾಕೆ ದೇವೇಗೌಡರ ರಾಜಕೀಯ ಭವಿಷ್ಯ ನಿರ್ಣಾಮ ಮಾಡಿದ್ದೆ ಇವರು. ಇಂತಹ ಈ ಕಾಂಗ್ರೆಸ್ ನವರಿಂದ ನಾನು ಕಲಿಬೇಕಾ ಅಂತ ಗುಡುಗಿದ್ದಾರೆ.
ವರದಿ : ಲಾವಣ್ಯ ಆನಿಗೋಳ