Tuesday, October 28, 2025

Latest Posts

ಆಂಟಿ ಮೋಹಕ್ಕೆ ಬಿದ್ದವ ಬೀದಿಯಲ್ಲೇ ಹೆಣವಾದ!

- Advertisement -

ಮುತ್ತು ಕೊಡ್ತೀನಿ ಬಾ ಅಂತ ಮನೆಗೆ ಕರೆದಿದ್ದ ಆಂಟಿಗೋಸ್ಕರ ಮಹಾರಾಷ್ಟ್ರದಿಂದ ಓಡೋಡಿ ಬಂದಿದ್ದ ಯುವಕ ಆಂಟಿ ಮೋಹಕ್ಕೆ ಬಿದ್ದು ಬೀದಿ ಹೆಣವಾಗಿ ಹೋಗಿದ್ದಾನೆ. ಪ್ರೀತಿ – ಪ್ರೇಮದ ಹಿನ್ನಲೆಯಲ್ಲಿ ಯುವಕನನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಪಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತ ಯುವಕ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗೌಣಗಾಂವ್ ಮೂಲದ ವಿಷ್ಣು ಎಂದು ಗುರುತಿಸಲಾಗಿದೆ.

ವಿಷ್ಣು ಹೈದ್ರಾಬಾದ್‌ನಲ್ಲಿ ಕೆಲಸ ಮಾಡುತ್ತಾ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದನು. ಇದೇ ವೇಳೆ ಬೀದರ್‌ನ ಮೂಲದ ಪೂಜಾ ಎಂಬ ವಿವಾಹಿತೆಯ ಪರಿಚಯವಾಗಿತ್ತು. ಗಂಡನನ್ನು ಬಿಟ್ಟು ಒಬ್ಬಳೇ ವಾಸಿಸುತ್ತಿದ್ದ ಪೂಜಾ ಹಾಗೂ ವಿಷ್ಣು ನಡುವೆ ಸ್ನೇಹ ಬೆಳೆದಿದೆ. ಬಳಿಕ ಅದು ಪ್ರೇಮ ಸಂಬಂಧಕ್ಕೆ ತಿರುಗಿತ್ತು. ಇಬ್ಬರೂ ಸೇರಿ ಸುಮಾರು ಒಂದು ವರ್ಷ ಹೈದ್ರಾಬಾದ್‌ನಲ್ಲಿ ವಾಸಿಸಿದ್ದರೆಂದು ಮೂಲಗಳು ತಿಳಿಸಿವೆ.

1 ವರ್ಷ ಪ್ರೇಮಗೀತೆ ಹಾಡಿದ್ದ ಪೂಜಾ ಆಂಟಿಗೆ ಅದೇನ್ ಅಯ್ತೋ ಗೊತ್ತಿಲ್ಲ. ಸುಮಾರು ಮೂರು ತಿಂಗಳ ಹಿಂದೆ ಹೈದ್ರಾಬಾದ್ ಬಿಟ್ಟು ತವರು ಊರಾದ ನಾಗನಪಳ್ಳಿಗೆ ಮರಳಿದ್ದಳು. ಅದಾದ ಬಳಿಕವೂ ವಿಷ್ಣು ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದನು. ಅಕ್ಟೋಬರ್ 21 ರಂದು ವಿಷ್ಣು ತನ್ನ ಸ್ನೇಹಿತರೊಂದಿಗೆ ನಾಗನಪಳ್ಳಿಗೆ ತೆರಳಿ ಪೂಜಾಳನ್ನು ಭೇಟಿ ಮಾಡಲು ಹೋದಾಗ ಅಲ್ಲಿನ ಘಟನೆಯೇ ಬದಲಾಗಿ ಹೋಗಿದೆ.

ಪೂಜಾ ಮನೆ ಬಳಿ ನಡೆದ ವಾಗ್ವಾದದ ವೇಳೆ, ಪೂಜಾಳ ತಂದೆ ಅಶೋಕ್ ಮತ್ತು ಸಹೋದರ ಗಜಾನನ ವಿಷ್ಣುವಿನ ಮೇಲೆ ದಾಳಿ ನಡೆಸಿದ್ದಾರೆ. ಸ್ಥಳೀಯರ ಹೇಳಿಕೆಯ ಪ್ರಕಾರ, ವಿಷ್ಣುವಿನ ಕೈ-ಕಾಲು ಕಟ್ಟಿ ದೊಣ್ಣೆಗಳಿಂದ ಹೊಡೆದು ಹಲ್ಲೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡ ವಿಷ್ಣುವನ್ನು ಚಿಂತಾಕಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಆತ ಮೃತ ಪಟ್ಟಿದ್ದಾನೆ.

ಘಟನೆಯ ಹಿನ್ನೆಲೆಯಲ್ಲಿ ವಿಷ್ಣುವಿನ ತಾಯಿ ಲಕ್ಷ್ಮೀಬಾಯಿ ಕಣ್ಣೀರಿಡುತ್ತಾ ನ್ಯಾಯ ಕೋರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ಮಗನನ್ನು ಮನೆಗೆ ಕರೆಸಿಕೊಂಡು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಯಾರೂ ಕಾಪಾಡಲಿಲ್ಲ ಎಂದು ಆಕ್ರಂದನ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಕಡೆ, ಪೂಜಾ ಕೂಡ ವಿಷ್ಣುವಿನ ವಿರುದ್ಧ ಪ್ರತಿದೂರು ನೀಡಿದ್ದಾಳೆ. ವಿಷ್ಣು ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಆಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾಳೆ. ಪ್ರಕರಣದ ಕುರಿತು ಚಿಂತಾಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಅಶೋಕ್ ಹಾಗೂ ಗಜಾನನರನ್ನು ಬಂಧಿಸಿದ್ದಾರೆ. ಘಟನೆಯ ಸಂಪೂರ್ಣ ಸತ್ಯ ತನಿಖೆಯ ನಂತರ ಮಾತ್ರ ಬಹಿರಂಗವಾಗಬೇಕಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss