ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಹಾನಗಲ್ ನಿವಾಸಿ 35 ವರ್ಷದ ಗೌಸ್ ಮೋದ್ದೀನ್ ಮೊಹಮ್ಮದ್ ರಫೀಕ್ ಎಂದು ಗುರುತಿಸಲಾಗಿದೆ. ಭಾನುವಾರ ದರ್ಗಾ ಕ್ರಾಸ್ ಬಳಿ ಶಕ್ತಿಧಾಮದ ಸಮೀಪ ಅಕ್ರಮವಾಗಿ ಗಾಂಜಾ...
ಕೋಲಾರದಲ್ಲಿ ಮನೆಗೆ ನುಗ್ಗಿದ ಕಳ್ಳರ ಗುಂಪು ನಗದು ಮತ್ತು ಚಿನ್ನಾಭರಣ ದೋಚಿದ ಬಳಿಕ ಮನೆಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಮಲ್ಲಸಂದ್ರದಲ್ಲಿ ಭೀಕರ ಕಳ್ಳತನ ಮಾಡಿ ಬೆಂಕಿ ಹಚ್ಚಿದ್ದಾರೆ. ಮನೆಗೆ ನುಗ್ಗಿದ ಕಳ್ಳರು ನಗದು ಹಣ ಹಾಗೂ ಚಿನ್ನಾಭರಣ ದೋಚಿದ ಬಳಿಕ, ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯು ರಾತ್ರಿ ವೇಳೆಯಲ್ಲಿ...
ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಣೆ ಪ್ರಕರಣ ಸಂಬಂಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಎಸ್ಪಿ ಗನ್‌ಮ್ಯಾನ್ ಬಂಧಿಸಲಾಗಿದೆ. ಅಕ್ರಮ ಪಡಿತರ ಅಕ್ಕಿ ಸಾಗಣೆದಾರರಿಂದ ಸುಮಾರು 3 ಲಕ್ಷ ರೂಪಾಯಿ ಲಂಚ ವಸೂಲಿ ಮಾಡಿದ ಆರೋಪದಡಿ ಬಳ್ಳಾರಿ ಎಸ್ಪಿ ಕಚೇರಿಯ ಗನ್‌ಮ್ಯಾನ್ ದೇವರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಹೆಚ್ಚಿನ ತನಿಖೆ...
ಮಂಡ್ಯ ಜಿಲ್ಲೆಯ ಹಲಗೂರು ವ್ಯಾಪ್ತಿಯ ನಿಟ್ಟೂರು ಸಮೀಪದ ಪ್ರದೇಶದಲ್ಲಿ ಅಕ್ರಮ ಜೂಜಾಟ ನಡೆಯುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಹಲಗೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. ದಾಳಿಯ ವೇಳೆ ಪಣಕ್ಕೆ ಇಟ್ಟಿದ್ದ ಸುಮಾರು ₹29 ಸಾವಿರ ನಗದನ್ನು ಪೊಲೀಸರು...
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಆಲ್ಕೆರೆ ಗ್ರಾಮದಲ್ಲಿ ತೀವ್ರ ಆತಂಕ ಮೂಡಿಸುವ ಘಟನೆ ಸಂಭವಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಮೃತರನ್ನು 40 ವರ್ಷದ ಶಿವಣ್ಣ ಅವರ ಮಕ್ಕಳು 10 ವರ್ಷದ ಜೀವನ್ ಮತ್ತು 6 ವರ್ಷದ ಪ್ರಾಣೇಶ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ...
ಸಣ್ಣ ಅನುಮಾನದಿಂದ ಆರಂಭವಾದ ಕೌಟುಂಬಿಕ ಕಲಹ ಭೀಕರ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಪತ್ನಿಯನ್ನು ಕೊಡಲಿಯಿಂದ ಹೊಡೆದು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಂದ ಪತಿ ಬಳಿಕ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ.
ಮೃತ ಮಹಿಳೆಯನ್ನ ಪುಷ್ಪ (24) ಎಂದು ಗುರುತಿಸಲಾಗಿದೆ. ಇವರು ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಖಾಸಗಿ ಬಟ್ಟೆ ಅಂಗಡಿಯಲ್ಲಿ...
ಗದಗ ಪೊಲೀಸರು ಅಂತರ್ ಜಿಲ್ಲಾ ಕಳ್ಳರ ವಿರುದ್ದ ಭರ್ಜರಿ ಕಾರ್ಯಾಚರಣೆ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಹಲವು ಜಿಲ್ಲೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಈ 11 ಆರೋಪಿಗಳ ಭಾಗವಹಿಸಿದ್ದರು ಎನ್ನುವ ನಿಜಾಂಶ ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ₹1,07,87,080 ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 587 ಗ್ರಾಂ ಬಂಗಾರದ...
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಂಡೀಪುರ ಗ್ರಾಮದಲ್ಲಿ ಅತ್ತೆಯೇ ಮಗಳ ಪ್ರಿಯಕರನ ಜೊತೆಗೂಡಿ ಅಳಿಯನ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.
ಮೃತನನ್ನು ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಸುಜಾತಾಳನ್ನು ಮದುವೆಯಾಗಿದ್ದನು. ಬಳಿಕ ಸುಜಾತಾ ಗಾರ್ಮೆಂಟ್ಸ್ ಕೆಲಸದ ವೇಳೆ ಅಮರ್ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆದಿತ್ತು ಎನ್ನುವ ಮಾಹಿತಿ ಇದೆ. ಈ ಸಂಬಂಧವೇ ಕೊಲೆಗೆ...
ಕೊಪ್ಪಳ ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಮುಸ್ತಫಾ ಖಾದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವತಿಯನ್ನು ಬಲವಂತವಾಗಿ ಪ್ರೀತಿಸಲು ಹಾಗೂ ಮದುವೆಯಾಗಲು ಒತ್ತಾಯಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.
ವೈರಲ್ ದೃಶ್ಯಗಳಲ್ಲಿ ಮುಸ್ತಫಾ ಖಾದ್ರಿ ಬೈಕ್ ಮೇಲೆ ಕುಳಿತು ಯುವತಿಯೊಂದಿಗೆ ವಾಗ್ವಾದ ನಡೆಸುತ್ತಿರುವುದು ಗೋಚರಿಸಿದೆ. ಇಷ್ಟು ದಿನ ಮಾತನಾಡಿ,...
ಬೀದರ್‌ನಲ್ಲಿ ದಾರುಣ ಘಟನೆ ಸಂಭವಿಸಿದ್ದು, ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ MBBS ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಅನಿಷ್ಕಾರ್ ಚವ್ಹಾಣ್ (21) ಎಂದು ಗುರುತಿಸಲಾಗಿದೆ.
ಇವರು ಬೀದರ್‌ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ MBBS ವ್ಯಾಸಂಗ ಮಾಡುತ್ತಿದ್ದರು. ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ್ ತಾಂಡಾ ನಿವಾಸಿಯಾಗಿದ್ದ ಅನಿಷ್ಕಾರ್, ವಸತಿ...