ಚಿನ್ನಾಭರಣದ ಬೆಲೆ ಕಳೆದ 10 ದಿನಗಳಿಂದ ನಿರಂತರ ಇಳಿಕೆಯಾಗುತ್ತಿತ್ತು. ಆದರೆ ಇಂದು ಮತ್ತೆ ಏರಿಕೆ ಕಂಡು, ಚಿನ್ನದ ದರ ಇಳಿಕೆಯಾಗಬಹುದು ಎಂದು ನಿರೀಕ್ಷಿಸಿದ್ದ ಜನರಿಗೆ ಸ್ವಲ್ಪ ನಿರಾಸೆ ತಂದಿದೆ.
ಅಕ್ಟೋಬರ್ 29, ಬುಧವಾರದಂದು ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ ₹12,158, ಅಂದರೆ ₹76 ಏರಿಕೆ ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಈಗ ₹1,21,580, ಅಂದರೆ ₹760 ಹೆಚ್ಚಳ ಕಂಡಿದೆ.
ಇದೇ ವೇಳೆ, 22 ಕ್ಯಾರೆಟ್ ಚಿನ್ನದ ದರ ಕೂಡ ಏರಿಕೆಯಾಗಿದೆ. ಗ್ರಾಂಗೆ ₹11,145, ಅಂದರೆ ₹70 ಹೆಚ್ಚಳ. 10 ಗ್ರಾಂಗೆ ₹1,11,450, ಅಂದರೆ ₹570 ಏರಿಕೆ ದಾಖಲಾಗಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ, 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹12,158 ಆಗಿದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ ₹1,21,580 ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಿಂದ ಮಳಿಗೆಗೆ ಸ್ವಲ್ಪ ವ್ಯತ್ಯಾಸ ಇರಬಹುದು.
ಬೆಳ್ಳಿ ದರ ಇಂದು ಸ್ಥಿರವಾಗಿದ್ದು, 1 ಗ್ರಾಂಗೆ ₹152 ಹಾಗೂ 1 ಕೆಜಿಗೆ ₹1,52,000 ರೂ. ಇದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

