ಬಿಹಾರದ ಮುಜಾಫರ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ರ್ಯಾಲಿಯಲ್ಲಿ ಭಾಷಣದ ವೇಳೆ ವಿರೋಧಿ ಪಡೆಗಳ ವಿರುದ್ಧ ಗುಡುಗಿದ್ದಾರೆ.
ಬಿಹಾರದ ಚುನಾವಣಾ ಕಣದಲ್ಲಿ, ತಮ್ಮನ್ನು ಯುವರಾಜರು ಎಂದು ಭಾವಿಸುವ ಇಬ್ಬರು ಯುವಕರಿದ್ದಾರೆ. ಅವರು ಸುಳ್ಳು ಭರವಸೆಗಳ ಅಂಗಡಿಗಳನ್ನು ತೆರೆದಿದ್ದಾರೆ. ಒಬ್ಬರು ಭಾರತದ ಅತ್ಯಂತ ಭ್ರಷ್ಟ ಕುಟುಂಬದ ಯುವರಾಜ, ಇನ್ನೊಬ್ಬರು ಬಿಹಾರದ ಅತ್ಯಂತ ಭ್ರಷ್ಟ ಕುಟುಂಬದ ಯುವರಾಜ. ಇಬ್ಬರೂ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ.
ಈ ಇಬ್ಬರು ವಿರೋಧ ಪಕ್ಷದ ನಾಯಕರು, ಹಿಂದಿನ ದಿನ ಬಿಹಾರದಲ್ಲಿ ತಮ್ಮ ತಮ್ಮನ್ನು ನಿಂದಿಸುತ್ತಾ ಚುನಾವಣಾ ರ್ಯಾಲಿ ಕಳೆದಿದ್ದಾರೆ. ಸವಲತ್ತುಗಳಲ್ಲಿ ಜನಿಸಿದವರು, ಸಾಮಾನ್ಯ ಹಿನ್ನೆಲೆಯಿಂದ ಬಂದವರನ್ನು ಗುರಿಯಾಗಿಸುವುದು ಸಹಜ. ಸಾಮಾನ್ಯ ಜನರನ್ನು ನಿಂದಿಸದೆ ಅವರಿಗೆ ಊಟ ಜೀರ್ಣವಾಗುವುದಿಲ್ಲ.
ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ನಿಂದಿಸುವುದನ್ನು, ಅವರು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸುತ್ತಾರೆ. ಬಡ, ಹಿಂದುಳಿದ ಕುಟುಂಬದ ಚಹಾ ಮಾರಾಟಗಾರ ಈಗ ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದಾರೆ ಎಂಬುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

