ಒಂದೆಡೆ ಚಳಿಗಾಲದ ರೇಸ್‌ಗಾಗಿ ಬೆಂಗಳೂರು ಟರ್ಫ್ ಕ್ಲಬ್ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಕುಣಿಗಲ್‌ಗೆ ಸ್ಥಳಾಂತರಗೊಳ್ಳಲು ರಾಜ್ಯ ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದಾರೆ.
ಬಿಟಿಸಿ ಅಧ್ಯಕ್ಷ ಮಂಜುನಾಥ ರಮೇಶ್ ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಕುಣಿಗಲ್‌ಗೆ ಸ್ಥಳಾಂತರಗೊಳ್ಳುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ.
ನಾವು ಸರ್ಕಾರದ ಸೂಚನೆಗಳನ್ನು ಪಾಲನೆ ಮಾಡಬೇಕಿದೆ ಎಂದು ಪುಣೆಯ ಪೂನವಲ್ಲಾ ಸ್ಟಡ್ ಫಾರ್ಮ್ಸ್‌ನ, ಜವರಾಯ್ ಎಸ್ ಪೂನವಲ್ಲಾ ಹೇಳಿದ್ದಾರೆ. ಇದೇ ವೇಳೆ 2 ವರ್ಷಗಳಲ್ಲಿ ಕುಣಿಗಲ್‌ಗೆ ಸ್ಥಳಾಂತರಗೊಳ್ಳುತ್ತಿದ್ದೇವೆ.
ಬಿಟಿಸಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸುಮಾರು 80 ಎಕರೆ ಭೂಮಿಯಲ್ಲಿ, ಆರು ಎಕರೆಗಳನ್ನು ಕ್ಲಬ್‌ನ ಆಡಳಿತಾತ್ಮಕ ಕಾರ್ಯಗಳನ್ನು ಮತ್ತು ಇತರ ಚಟುವಟಿಕೆಗಳನ್ನು ನಿರ್ವಹಣೆಗೆ ಬಿಟ್ಟುಕೊಡಲು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರಂತೆ.
ಜಿಎಸ್‌ಟಿ 2.0 ಅನುಷ್ಠಾನದ ನಂತರ, ನಾವು ರೇಸ್‌ಗಳನ್ನು ನಡೆಸುವ ಸ್ಥಿತಿಯಲ್ಲಿ ಇರಲಿಲ್ಲ, ಈ ಬಗ್ಗೆ ಆಯೋಜಿಸಲಾಗುತ್ತಿದ್ದು, ಒಟ್ಟು 24 ದಿನಗಳ ಕಾಲ ರೇಸಿಂಗ್ ನಡೆಯಲಿದೆ.
ಜಿಎಸ್‌ಟಿ ಸಂಬಂಧ ಸುಪ್ರೀಂಕೋರ್ಟ್‌ಗೆ ಹೋಗಿದ್ದೇವೆ. ಸರಕುಗಳ ಮೇಲೆ ವಿಧಿಸಲಾದ ಶೇಕಡಾ 40ರಷ್ಟು ತೆರಿಗೆಯಿಂದ, ಬೆಟ್ಟಿಂಗ್‌ಗೆ ವಿನಾಯಿತಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ರು.

