Recipe: ನಾಾರ್ಮಲ್ ಆಗಿ ನಾವು ನೀವು ಕಪ್ಪು ಕಡಲೆಯ ಕೋಸೋಂಬರಿ ಅಥವಾ ಸಲಾಾಡ್ ಅಂದ್ರೆ, ಅದನ್ನು ಬೇಯಿಸಿ ಅಥವಾ ನೆನೆಸಿ ಅದಕ್ಕೆ ತರಕಾರಿ, ಕಾಯಿ ತುರಿ ಹಾಕಿರುವ ಸಲಾಡ್ ತಿಂದಿರ್ತೀವಿ. ಇಂದು ನಾವು ಈ ಕಪ್ಪು ಕಡಲೆ ಸಲಾಡ್‌ಗೆ ಕಿವಿ ಫ್ರೂಟ್ ಡ್ರೆಸ್ಸಿಂಗ್ ಮಿಕ್ಸ್ ಮಾಡಿ, ಹೇಗೆ ಆರೋಗ್ಯಕರ, ರುಚಿಯಾಗಿ ಸಲಾಡ್ ಮಾಡೋದು ಅಂತಾ ಹೇಳ್ತೀವಿ.
1 ಕಪ್ ಕಪ್ಪು ಕಡಲೆ, ಬಿಳಿ ಕಡಲೆ, ಸ್ವೀಟ್ ಕಾರ್ನ್ ಮಿಕ್ಸ್. ಕಡಲೆಯನ್ನು ನೆನೆಸಿ, ಬೇಯಿಸಿರಬೇಕು. ಸ್ವೀಟ್ ಕಾರ್ನ್ ಸಹ ಬೇಯಿಸಿರಬೇಕು. ಇವೆಲ್ಲವನ್ನೂ ಮಿಕ್ಸಿಂಗ್ ಬೌಲ್‌ಗೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಸೌತೇಕಾಯಿ, ಈರುಳ್ಳಿ, ಟೋಮೆಟೋ, ಕ್ಯಾರೇಟ್ ತುರಿ, ತುರಿದ ಕ್ಯಾಬೇಜ್, ಬೆಲ್ ಪೆಪ್ಪರ್- ಕ್ಯಾಪ್ಸಿಕಂ, ಕಪ್ಪು ದ್ರಾಕ್ಷಿ, ಧನಿಯಾ, ಸ್ವಲ್ಪ ಉಪ್ಪು ಎಲ್ಲವನ್ನೂ ಸೇರಿಸಬೇಕು.
ಬಳಿಕ ಡ್ರೆಸ್ಸಿಂಗ್ ತಯಾರಿಸಲು ಸಿಪ್ಪೆ ತೆಗೆದ ಕಿವಿ ಫ್ರೂಟ್, ಪುದೀನಾ ಎಲೆ, ಹಸಿಮೆಣಸು, ಶುಂಟಿ, ಬೆಳ್ಳುಳ್ಳಿ, ಸ್ವಲ್ಪ ಉಪ್ಪು, ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ, ಪೇಸ್ಟ್ ತಯಾರಿಸಿದ್ರೆ ಡ್ರೆಸ್ಸಿಂಗ್ ರೆಡಿ. ಈಗ ಸಲಾಡ್ ಮೇಲೆ ಇದನ್ನು ಹಾಕಿ ಮಿಕ್ಸ್ ಮಾಡಿ, ಸಲಾಡ್ ಸೇವಿಸಿ.

