Tumakuru News: ತುಮಕೂರು: ಲಂಚ ಕೇಳಲು ಹೋಗಿ ಗ್ರಾ ಆಡಳಿತಾಧಿಕಾರಿ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ, ಮಾಚನಹಳ್ಳಿ ಗ್ರಾಮದ ವಾಸಿಯಾದ ಪಿರ್ಯಾದಿ ಶ್ರೀ ಯೋಗೀಶ್.ಬಿ ರವರ ತಾತ ಗಂಗ ಗುಡ್ಡಯ್ಯ ರವರ ಹೆಸರಿನಲ್ಲಿದ್ದ ತುಮಕೂರು ತಾಲ್ಲೂಕು ಮೈದಾಳ ಅಮಾನಿಕೆರೆ ಸರ್ವೆ ನಂಬರಿನ ಪಿತ್ರಾರ್ಜಿತವಾದ ಮೂವತ್ತೆಂಟೂವರೆ ಗುಂಟೆ ಜಮೀನನ್ನು, ಪಿರ್ಯಾದಿ ತಂದೆಯಾದ ಬಸವರಾಜು ರವರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು ಕ್ಯಾತ್ಸಂದ್ರ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿಯಾದ ಮಂಜುನಾಥ ರವರು ಮೊದಲೇ 10.000=00 ರೂಗಳನ್ನು ದೂರುದಾರರಿಂದ ಲಂಚವಾಗಿ ಪಡೆದು, ಇನ್ನೂ ಹೆಚ್ಚಿನ 10,000=00 ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಪಿರ್ಯಾದಿ ಶ್ರೀ ಯೋಗೀಶ್.ಬಿ ರವರಿಗೆ ಲಂಚ ನೀಡಲು ಇಷ್ಟವಿಲ್ಲದೇ, ದಿನಾಂಕ: 04/11/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಕಚೇರಿಗೆ ಹಾಜರಾಗಿ ದೂರು ನೀಡಿದ್ದು. ಪೊಲೀಸ್ ಉಪಾಧೀಕ್ಷಕರಾದ ಡಾ॥ ಸಂತೋಷ್.ಕೆ.ಎಂ ರವರು ಮೊ.ನಂ:09/2025 ಕಲಂ-7(b) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ-1988 (ತಿದ್ದುಪಡಿ-2018) ರಂತೆ ಪ್ರಕರಣ ದಾಖಲಿಸಿದ್ದು, ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ಇದೇ ದಿನ ದಿನಾಂಕ:04/11/2025 ರಂದು ಟ್ರ್ಯಾಪ್ ಕಾರ್ಯಾಚರಣೆ ವೇಳೆ ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿನ ಹಾಪ್ ಕಾಮ್ಸ್ ಬಳಿಯಿರುವ ಊರ್ಡಿಗೆರೆ ಹೋಬಳಿ ಕಂದಾಯ ನಿರೀಕ್ಷಕರ ಕಛೇರಿ ಬಳಿ ಮದ್ಯಾಹ್ನ 03.00 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಯೋಗೀಶ್.ಬಿ ರವರಿಂದ 10.000=00 ರೂ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಆಡಳಿತಾಧಿಕಾರಿ ಮಂಜುನಾಥ ರವರನ್ನು ತನಿಖಾಧಿಕಾರಿ ಡಾ| ಸಂತೋಷ್.ಕೆ.ಎಂ. ಪೊಲೀಸ್ ಉಪಾಧೀಕ್ಷಕರು ರವರ ನೇತೃತ್ವದ ತಂಡ ಗ್ರಾಮ ಆಡಳಿಧಿಕಾರಿ ಮಂಜುನಾಥ್ ರವರನ್ನು ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ತುಮಕೂರು ಲೋಕಾಯುಕ್ತ
ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ.ಎ.ವಿ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಸಂತೋಷ್.ಕೆ.ಎಂ ರವರ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕರುಗಳಾದ ಶ್ರೀ ಬಿ.ಮೊಹಮ್ಮದ್ ಸಲೀಂ, ಶ್ರೀ ಕೆ.ಸುರೇಶ, ಶ್ರೀ ಶಿವರುದ್ರಪ್ಪ ಮೇಟಿ ಶ್ರೀ ರಾಜು.ಟಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಲಂಚ ಸ್ವೀಕರಿಸಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

