- Advertisement -
Tumakuru News: ತುಮಕೂರು: ತುಮಕೂರಿನ ಶ್ರೀ ಉಣ್ಣೇಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ತುಮಕೂರು ಜಿಲ್ಲೆಯ ಚೇಳೂರು ಸುಕ್ಷೇತ್ರ ಈರೇನಹಳ್ಳಿಯ ದೇವಾಲಯ ಇದಾಗಿದ್ದು, ಪವಾಡ ಪುರುಷರು ಇದನ್ನು ನಿರ್ಮಿಸಿದ್ದರೆಂದು ಹೇಳಲಾಗಿದೆ. ಶ್ರೀ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆಗೆ ಚಾಲನೆ ನೀಡಿದ್ದಾರೆ.
ಹತ್ತೂರ ಹಳ್ಳಿಯ ಜನರು ಸೇರಿ ಈ ಪೂಜೆಯನ್ನು ಆಚರಿಸುತ್ತಿದ್ದು, ಮಹಿಳೆಯರು ಸತ್ಯ ಧರ್ಮದ ಹಣತೆಯ ದೀಪ ಹಚ್ಚುವ ಮೂಲಕ ದೀಪೋತ್ಸವ ಆಚರಿಸುತ್ತಾರೆ. ಈ ವೇಳೆ ಭದ್ರಕಾಳಿ ವೀರಗಾಸೆ, ಡೊಳ್ಳು ಇತ್ಯಾದಿ ಜಾನಪದ ಕಾರ್ಯಕ್ರಮವೂ ನಡೆಯುತ್ತದೆ. ಇಲ್ಲಿ ಮಂಡಲ ಪೂಜೆಯೂ ನಡೆಯುವುದು ವಿಶೇಷವಾಗಿದೆ.
- Advertisement -

