Tumakuru News: ತುಮಕೂರು: ಕಾಂಗ್ರೆಸ್ನ ಕೆಲ ನಾಯಕರೇ ಹೇಳಿರುವಂತೆ ನವೆಬಂರ್ ಕ್ರಾಂತಿ ನಡೆಯಲಿದೆ. ಈ ವೇಳೆ ಸಚಿವ ಸಂಪುಟ ವಿಸ್ತರಣ ಆಗಲಿದೆ, ಸಿಎಂ ಬದಲಾಗುತ್ತಾರೆ ಅನ್ನೋ ಗುಸುಗುಸು ಜೋರಾಗಿಯೇ ಕೇಳುತ್ತಿದೆ. ಅದಕ್ಕೆ ತಕ್ಕಂತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಜೋರಾಗಿಯೇ ಇದೆ.
ಇನ್ನು ಡಿಸಿಎಂ ಡಿ.ಕೆ.ಶಿ ಫ್ಯಾನ್ಸ್ ಕೂಡ ತಮ್ಮ ನೆಚ್ಚಿನ ನಾಯಕ ಸಿಎಂ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಜೋಡಿಹೊಸಹಳ್ಳಿ ಎಂಬಲ್ಲಿ, ಡಿಕೆಶಿ ಸಿಎಂ ಆಗಲಿ ಎಂದು ಭಕ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಲ್ಲಿನ ವರಮಹಾಲಕ್ಷ್ಮೀ ದೇವಸ್ಥಾನದಲ್ಲಿ, ಡಿಕೆಶಿ ಹಾಗೂ ಡಾ.ರಂಗನಾಥ್ ಅಭಿಮಾನಿಗಳು ಸೇರಿಗಣಪತಿ ಹೋಮಾ , ಚಂಡಿಕಾ ಹೋಮಾ , ದುಗಾ೯ ಹೋಮ ಮಾಡಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗಿ, ಡಿಕೆಶಿ ಸಿಎಂ ಆಗಲೆಂದು ಪ್ರಾರ್ಥಿಸಿದ್ದಾರೆ. ಯಾಕೆ ಡಿಕೆಶಿ ಸಿಎಂ ಆಗಬೇಕು ಅಂದ್ರೆ, ರಾಜ್ಯದ ಅಭಿವೃದ್ಧಿಗಾಗಿ ಡಿಕೆಶಿ ಸಿಎಂ ಆಗಬೇಕು ಅಂತಾರೆ ಅಭಿಮಾನಿಗಳು.

