Sandalwood: ನಿರ್ದೇಶಕರಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು 1 ಸಿನಿಮಾ ಅಂದ್ರೆ ಹೇಗಿರಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ.
ನಿರ್ದೇಶಕರಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಹೇಳುವುದೇನೆಂದರೆ, ಸಿನಿಮಾ ಅಂದ್ರೆ ಬಜೆಟ್ ಕಡಿಮೆ ಇದ್ದರೂ, ಕಂಟೆಂಟ್ ಉತ್ತಮವಾಗಿರಬೇಕು. ನೂತನ ಕಲಾವಿದರು, ನಬತನ ತಂತ್ರಜ್ಞರು ಇರಬೇಕು. ಉತ್ತಮ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಇಂಥ ವಿಭಿನ್ನ ಕಂಟೆಂಟ್ ಇರುವ ಕಥೆಗಳನ್ನು ಜನ ಸ್ವಾಗತಿಸಬೇಕು ಅಂತಾರೆ ನಾಗತೀಹಳ್ಳಿ ಚಂದ್ರಶೇಖರ್.
ಇಂಥ ಪ್ರಯೋಗ ಮಲಯಾಳಂನಲ್ಲಿ ಆಗುತ್ತಿದೆ. ಆದರೆ ಕನ್ನಡದಲ್ಲಿ ಈ ಅನುಪಾತ ಕಡಿಮೆ ಇದೆ. ಸಿನಿಮಾ ಅನ್ನೋದು ಸದ್ದು, ಗದ್ದಲಕ್ಕೂ ಮೀರಿ ಅದು 1 ಕಲೆ. ಸುಂದರವಾದ ಸಂಗೀತ, ಕಥೆ, ಸಂಭಾಷಣೆಯನ್ನು ಆಧರಿಸಿದ ಪರಿಪೂರ್ಣ ಕಲೆ ಅಂತಾರೆ ನಾಗತೀಹಳ್ಳಿ ಚಂದ್ರಶೇಖರ್.
ಇನ್ನು ತಮ್ಮ ಸಿನಿಮಾವನ್ನೇ ಉದಾಹರಣೆ ನೀಡಿ ಮಾತನಾಡಿರುವ ನಾಗತೀಹಳ್ಳಿ ಚಂದ್ರಶೇಖರ್, ನನ್ನೆಲ್ಲ ಸಿನಿಮಾಗಿಂತ ನಾನು ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾಗೆ ಹೆಚ್ಚು ಎಫರ್ಟ್ ಹಾಕಿದ್ದೆ. ಅಲ್ಲಿ ಸ್ಯಾಂಡಲ್‌ವುಡ್‌ನ ಪ್ರಸಿದ್ಧ ಕಲಾವಿದರಿದ್ದರು. ಆದರೂ ಆ ಸಿನಿಮಾ ಹೆಚ್ಚು ದಿನ ಓಡಲಿಲ್ಲ. ಹಾಗಾಗಿ ಸಿನಿಮಾ ಬಜೆಟ್ಗಿಂತ ಕಂಟೆಂಟ್ ಮುಖ್ಯ ಅಂತಾರೆ ಚಂದ್ರಶೇಖರ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

